ಬೆಂಗಳೂರು: ವರ್ಷಾಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಮೊದಲ ಡ್ರೈವರ್ ಲೆಸ್ ಮೆಟ್ರೋ ರೈಲು ಸಂಚಾರ ನಡೆಸಲು ಬಿಎಂಆರ್‌ಸಿಎಲ್ ಸಕಲ ಸಿದ್ದತೆ ಮಾಡಿಕೊಂಡಿದೆ.
ಇದನ್ನೂ ಓದಿ: ಪ್ರಿಯಕರನಿಗೆ ಥಳಿಸಿ ತಾಳಿ ಕಟ್ಟಿಸಿಕೊಂಡ ಪ್ರಿಯತಮೆ!
ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿ ಲೋಕೊಪೈಲಟ್ ಇಲ್ಲದೆ ನಗರದ ಆರ್.ವಿ.ರೋಡ್-ಬೊಮ್ಮ ಸಂದ್ರ ಮಾರ್ಗವಾಗಿ ಚಾಲನೆಗೊಳಿಸಲು ತೀರ್ಮಾನಿಸಲಾಗಿದೆ, ಇದರೊಂದಿಗೆ ರಾಜ್ಯದ ಮೊದಲ ಡ್ರೈವರ್ ಲೆಸ್ ಮೆಟ್ರೋ ರೈಲು ಸಂಚಾರಕ್ಕೆ ಬೆಂಗಳೂರು ಮೆಟ್ರೋ ನಿಗಮ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಳಿಕ ಕಾಳೇನ ಅಗ್ರಹಾರ ದಿಂದ ನಾಗವಾರ ಮಾರ್ಗ, ಏರ್‌ಪೋರ್ಟ್ ಮಾರ್ಗದಲ್ಲೂ ಡ್ರೈವರ್ ಲೆಸ್ ಮೆಟ್ರೋ ಓಡಾಟ ನಡೆಸಲು ಬಿಎಂಆರ್‌ಸಿಎಲ್ ಸಕಲ ತಯಾರಿ ನಡೆಸಿದ್ದು, ತಾಂತ್ರಿಕ ಸಮಸ್ಯೆಗಳ ನಿರ್ವಹಣೆಗೆ ಮೊದಲ 3 ವರ್ಷ ಅಟೆಂಡರ್‌ಗಳನ್ನ ನೇಮಿಸಲಾಗುತ್ತೆ, ಯಾವುದೇ ತೊಂದರೆಗಳು ಕಾಣಿಸಿಕೊಳ್ಳದಿದ್ದರೇ ಅಟೆಂಡರ್‌ಗಳು ಇರುವುದಿಲ್ಲ,
ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ.