ತುಮಕೂರು : ಸ್ವಲ್ಪದರಲ್ಲೇ ಚಿರತೆ ದಾಳಿಯಿಂದ ರೈತನೊಬ್ಬ ಪಾರಾಗಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕ್ಯಾಮಸಂದ್ರ ಗ್ರಾಮದಲ್ಲಿ ನಡೆದಿದೆ.
ಜಯರಾಮ್ ಪ್ರಾಣಾಪಾಯದಿಂದ ಪಾರಾದ ರೈತರಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ಚಿರತೆ ಬಾಯಿಗೆ ರೈತ ಸಿಗುತ್ತಿದ್ದ.
ರೈತ ಜಯರಾಮ್ ಎಂದಿನಂತೆ ತನ್ನ ಜಮೀನಿಗೆ ತೆರಳಿದ್ದರು. ಈ ವೇಳೆ ತೋಟದ ಪಂಪ್ ಹೌಸ್ ಬಳಿ ಹೋಗಿದ್ದರು. ಅದೇ ಪಂಪ್ ಹೌಸ್ ಒಳಗೆ ಚಿರತೆ ಸೇರಿಕೊಂಡಿತ್ತು. ಕತ್ತಲಲ್ಲಿ ಚಿರತೆಯ ಕಾಲು ಮುಟ್ಟಿ ಜಯರಾಜ್ ಅನುಮಾನಗೊಂಡಿದ್ದರು. ಕೂಡಲೇ ಪಕ್ಕದ ತೋಟದವರನ್ನು ಕರೆತಂದು ತೋರಿಸಿದ್ದಾರೆ.
ಪಂಪ್ ಹೌಸ್ ಬಳಿ ಬಂದು ನೋಡಿದಾಗ ಚಿರತೆ ಇರುವುದು ಸ್ಪಷ್ಟವಾಗಿದೆ. ಕೂಡಲೇ ಪಂಪ್ ಹೌಸ್ ಬಾಗಿಲು ಹಾಕಿದ್ದರು. ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಪಂಪ್ ಹೌಸ್ ಸುತ್ತ ಬಲೆ ಬಿಟ್ಟು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಣೆ
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಟ್ರಾಫಿಕ್ ಪೊಲೀಸ್ ರಕ್ಷಿಸಿರುವ ಘಟನೆ ಬೆಳಗಾವಿಯ ಅಶೋಕ ವೃತ್ತದ ಕೋಟೆ ಕೆರೆ ಬಳಿ ನಡೆದಿದೆ. ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ಉತ್ತರ ಸಂಚಾರಿ ಪೊಲೀಸ್ ಪೇದೆ ಕಾಶಿನಾಥ್ ಈರಗಾರ್ ರಕ್ಷಿಸಿದ್ದಾರೆ.