Wednesday, December 25, 2024

ದೇವರ ದರ್ಶನಕ್ಕಾಗಿ ದೇವಾಲಯಕ್ಕೆ ಬಂದ ಕರಡಿ : ಆತಂಕದಲ್ಲಿ ಭಕ್ತರು!

ದಾವಣಗೆರೆ : ದೇವಾಲಯಕ್ಕೆ ನುಗ್ಗಿದ ಕರಡಿ ರಂಪಾಟ ನಡೆಸಿರುವ ಘಟನೆ ಕಣ್ವಗುಪ್ಪೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಇದನ್ನೂ ಓದಿ: ವಿವೇಕ್ ಒಬೆರಾಯ್‌ಗೆ 1.5 ಕೋಟಿ ರು. ವಂಚನೆ!

ಜಗಳೂರು ತಾಲ್ಲೂಕಿನ ಕಣ್ವಗುಪ್ಪೆ ಗ್ರಾಮದಲ್ಲಿರುವ ಆಂಜನೇಯ, ಚೌಡಮ್ಮ ದೇಗುಲಕ್ಕೆ ನುಗ್ಗಿದ ಕರಡಿ ದಾಂದಲೆ ಎಬ್ಬಿಸಿದ್ದು ಗ್ರಾಮದಲ್ಲಿರುವ ದೇವಾಲಯಕ್ಕೆ ಆಗಮಿಸುವ ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ,

ಕಳೆದ 2 ತಿಂಗಳಿನಿಂದ ಕಣ್ವಗುಪ್ಪೆ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಕರಡಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES