ಮುಂಬೈ: ಕಾರ್ಯಕ್ರಮಗಳು ಮತ್ತು ಸಿನಿಮಾ ನಿರ್ಮಾಣದಲ್ಲಿ ಬಂಡವಾಳ ಹಾಕಿದರೆ ಉತ್ತಮ ಲಾಭ ಕೊಡಿಸುವುದಾಗಿ ಹೇಳಿ ನಟ ವಿವೇಕ್ ಒಬೆರಾಯ್ ಅವರಿಂದ 1.55 ಕೋಟಿ ರು. ಪಡೆದ ಮೂವರು ಬಳಿಕ ಅವರಿಗೆ ವಂಚಿಸಿರುವ ಪ್ರಕರಣ ನಡೆದಿದೆ.
ಇದನ್ನೂ ಓದಿ: ಡ್ರೈವರ್ ಲೆಸ್ ಮೆಟ್ರೋ ಟ್ರೈನ್ ಚಾಲನೆಗೆ ಬಿಎಂಆರ್ಸಿಎಲ್ ತಯಾರಿ !
ಘಟನೆಯ ಕುರಿತು ಬುಧವಾರ ನಟ ವಿವೇಕ್ ಒಬೆರಾಯ್ ಅವರ ಅಕೌಂಟೆಂಟ್ ಮೂವರ ವಿರುದ್ಧ ಅಂಧೇರಿ ಪೂರ್ವದ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಚಲನಚಿತ್ರ ನಿರ್ಮಾಪಕ ಸೇರಿದಂತೆ ಮೂವರು ಆರೋಪಿಗಳು ನಟನ ವ್ಯಾಪಾರ ಪಾಲುದಾರರಾಗಿದ್ದು, ಈವೆಂಟ್ ಮತ್ತು ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಹಣ ಹೂಡುವಂತೆ ಕೇಳಿದ್ದರು ಎಂದು ಅವರು ಹೇಳಿದ್ದಾರೆ.
ಈ ಯೋಜನೆಯಲ್ಲಿ ನಟ 1.55 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ನಟನ ಪತ್ನಿ ಕೂಡ ಸಂಸ್ಥೆಯಲ್ಲಿ ಪಾಲುದಾರರಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿದ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.