Tuesday, December 3, 2024

ಹಿಂದೂಗಳಿಗೆ ಜಯ, ಜ್ಞಾನವಾಪಿ ಮಸೀದಿ ಸರ್ವೆಗೆ ಕೋರ್ಟ್ ಅನುಮತಿ

ಬೆಂಗಳೂರು : ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ವಾರಣಾಸಿ ಕೋರ್ಟ್ ಅನುಮತಿ ನೀಡಿದ್ದು, ಹಿಂದೂಗಳಿಗೆ ಜಯವಾಗಿದೆ.

ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಉತ್ತರ ಪ್ರದೇಶದ ವಾವಾರಣಾಸಿ ಕೋರ್ಟ್‌ ಇಂದು ವಿಚಾರಣೆ ನಡೆಸಿತು. ಮಸೀದಿಗೂ ಮೊದಲು ಈ ಸ್ಥಳದಲ್ಲಿ ಏನಿತ್ತು? ಇದನ್ನು ಅರಿಯೋದಕ್ಕೆ ಸರ್ವೆಗೆ ಕೋರ್ಟ್ ಅನುಮತಿ ನೀಡಿದೆ.

ಪುರಾತತ್ವ ಇಲಾಖೆಯಿಂದ ಜ್ಞಾನವಾಪಿ ಸಂಕೀರ್ಣದಲ್ಲಿ ಸರ್ವೆ ನಡೆಯಲಿದೆ. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಮೀಕ್ಷೆ ನಡೆಸಿ ಅಂತಿಮ ವರದಿಯನ್ನು ಆಗಸ್ಟ್ 4 ರೊಳಗೆ ಸಲ್ಲಿಸಬೇಕು ಎಂದು ವಾರಣಾಸಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಇದು ಸತ್ಯಕ್ಕೆ ಸಂದ ಜಯ

ಹಿಂದೂ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ಮಾತನಾಡಿ, ಇದು ಸತ್ಯಕ್ಕೆ ಸಂದ ಜಯ. ASIS ಸರ್ವೆಗೆ ನಮ್ಮ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಲಾಗಿದೆ. ಇದು ಪ್ರಕರಣದಲ್ಲಿ ಮಹತ್ವದ ತಿರುವು ಎಂದು ಹೇಳಿದ್ದಾರೆ.

ಹಿಂದೂ ಪರ ವಾದ ಮಂಡಿಸಿದ ವಿಷ್ಣು ಶಂಕರ್ ಜೈನ್ ಮಾತನಾಡಿ, ನಮ್ಮ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆ. ವಾಜು ಟ್ಯಾಂಕ್ ಹೊರತುಪಡಿಸಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್‌ಐ ಸರ್ವೆ ನಡೆಸಲು ನ್ಯಾಯಾಲಯ ಆದೇಶಿಸಿದೆ. 3 ರಿಂದ 6 ತಿಂಗಳೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES