ಬೆಂಗಳೂರು : ಗಾಂಧಿ ಕೊಂದವರು ಗಾಂಧಿ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಗಾಂಧಿ ಪ್ರತಿಮೆ ಎದುರು ಪ್ರತಿಭಟಿಸುವುದಲ್ಲ, ಗೋಡ್ಸೆ ಪ್ರತಿಮೆ ಎದುರು ಪ್ರತಿಭಟಿಸಬೇಕಿತ್ತು ಬಿಜೆಪಿಯವರು ಎಂದು ಚಾಟಿ ಬೀಸಿದರು.
ಪೃಜಾಪ್ರಭುತ್ವದ ಯಶಸ್ಸಿಗೆ ಪ್ರಬಲ ವಿರೋಧ ಪಕ್ಷ ಇರಬೇಕು. ಆಡಳಿತರೂಢ ಸರ್ಕಾರದ ತಪ್ಪನ್ನು ಹೇಳುವ ಕೆಲಸ ಮಾಡಬೇಕು. ಆದ್ರೆ, ಬಿಜೆಪಿ ಹಾಗೂ ಜೆಡಿಎಸ್ ಬಾಯ್ಕಾಟ್ ಮಾಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲು, ವಿಪಕ್ಷ ನಾಯಕ ಗೈರಾಗಿರುವ(ವಿಪಕ್ಷ ನಾಯಕ ಇಲ್ಲದೆ) ಸದನಕ್ಕೆ ಉತ್ತರ ಕೊಡ್ತಿದ್ದೇನೆ ಎಂದು ಕಿಡಿಕಾರಿದರು.
ಇದನ್ನೂ ಓದಿ : NDAನೂ ಇಲ್ಲ, UPAನೂ ಇಲ್ಲ.. ! : ಗೊಂದಲಕ್ಕೆ ತೆರೆ ಎಳೆದ ದೇವೇಗೌಡ
ಅನಾಗರಿಕವಾಗಿ ನಡೆದುಕೊಂಡಿದ್ದಾರೆ
ವಿಧಾನಸಭೆಯಲ್ಲಿ ಅನಾಗರಿಕವಾಗಿ ನಡೆದುಕೊಂಡ ಸದಸ್ಯರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ. ಪೇಪರ್ ಹರಿದು ಉಪಸಭಾಧ್ಯಕ್ಷರ ಮುಖಕ್ಕೆ ಎಸೆದ್ರು. ಮಾರ್ಷಲ್ ಇಲ್ಲದಿದ್ದರೆ ಏನ್ ಮಾಡ್ತಿದ್ರೋ ಗೊತ್ತಿಲ್ಲ. ಅದಕ್ಕಾಗಿ 10 ಸದಸ್ಯರ ಅಮಾನತು ಮಾಡಿದ್ದಾರೆ. ಉಳಿದವರು ಬಂದಿಲ್ಲ, ಪರಿಷತ್ ಗೂ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಬೇಜವಾಬ್ಸಾರಿ ಹಾಗೂ ಜನ ವಿರೋಧಿಗಳು
ನಾವು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವಾ ಅಂತ ನೋಡಬೇಕಿತ್ತು. ಎಷ್ಟು ಹಣ ರಾಜ್ಯಕ್ಕೆ ಖರ್ಚು ಮಾಡುತ್ತಿದ್ದೇವೆ. ಯಾವುದಕ್ಕೆಲ್ಲ ಖರ್ಚು ಮಾಡುತ್ತಿದ್ದೇವೆ. ಅದಕ್ಕೆ ಹೇಗೆ ಹಣ ಹೊಂದಿಸಿದ್ರು, ಎಲ್ಲ ನೋಡಬೇಕಿತ್ತು. ಆದರೆ, ಅದ್ಯಾವುದನ್ನೂ ನೋಡದೆ.. ಮಾತಾಡದೆ.. ವಿಪಕ್ಷ ಸದಸ್ಯರು ಹೊರಗಿದ್ದಾರೆ. ಕಾರಣ ಇಲ್ಲದೆ ಗೈರಾಗಿದ್ದಾರೆ. ಬೇಜವಾಬ್ಸಾರಿ ಹಾಗೂ ಜನ ವಿರೋಧಿಗಳು ಎಂದು ಗುಡುಗಿದರು.