Sunday, December 22, 2024

ಡ್ರಗ್ಗ್ ಚಾಕೋಲೆಟ್ ಮಾರಾಟ ಜಾಲ ಬಂಧಿಸಿದ ಪೊಲೀಸರು!

ಮಂಗಳೂರು : ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್​ ಮಾಡಿ ಚಾಕಲೇಟ್​ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಖತರ್ನಾಕ್​ ಮಾದಕ ಜಾಲವನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.

ಇದನ್ನೂ ಓದಿ: ಅಕ್ರಮವಾಗಿ ಶ್ರೀಗಂಧ ಮರಗಳನ್ನು ಸಾಗಿಸುತ್ತಿದ್ದ ಆರೋಪಿಗಳ ಬಂಧನ!

ಉತ್ತರ ಪ್ರದೇಶ ಮೂಲದ ಮನೋಹರ್, ಬೆಚನ್ ಸೋನ್ಕರ್ ಬಂಧಿತ ಆರೋಪಿಗಳು, ಬಂಧಿತರಿಂದ 3 ಗೋಣಿ ಚೀಲಗಳಲ್ಲಿ ಬಚ್ಚಿಡಲಾಗಿದ್ದ 85 ಕೆ.ಜಿ. ತೂಕದ ಬಾಂಗ್ ಚಾಕೊಲೇಟ್‌ ಮತ್ತು ಹೈಲ್ಯಾಂಡ್ ಬಳಿಯ ಗೂಡಂಗಡಿಯಲ್ಲಿ  ಇಡಲಾಗಿದ್ದ 12 ಕೆ.ಜಿ ಚಾಕೊಲೇಟನ್ನು ಪೊಲೀಸರು ವಶಕ್ಕೆ ಪಡೆದಿದ್ದು ಗಾಂಜಾ ಅಂಶದ ಖಚಿತತೆ ಪರಿಶೀಲನೆಗೆ FSL ಗೆ ಕಳುಹಿಸಿದ್ದಾರೆ.

ವಿದ್ಯಾರ್ಥಿಗಳನ್ನು ಟಾರ್ಗೆಟ್​ ಮಾಡಿ ಮಂಗಳೂರಿನ ರಥಬೀದಿಯ ವೈಭವ್ ಪೂಜಾ ಸೇಲ್ಸ್ ಅಂಗಡಿಯಲ್ಲಿ “ಬಾಂಗ್​ ಚಾಕಲೋಟ್” ಹೆಸರಿನ ಮಾದಕ ವಸ್ತು ಮಿಶ್ರಿತ ಚಾಕೋಲೆಟ್​ಗಳನ್ನು 1 ರೂ. ಚಾಕೊಲೇಟ್‌ 20 ರೂಪಾಯಿಗೆ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂದಿಸಿದ್ದಾರೆ.

RELATED ARTICLES

Related Articles

TRENDING ARTICLES