Wednesday, January 22, 2025

ವರುಣಾರ್ಭಟಕ್ಕೆ ಆರೆಂಜ್ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ

ಉತ್ತರ ಕನ್ನಡ : ಮುಂದುವರೆದ ವರುಣನ ಅಬ್ಬರದ ಹಿನ್ನೇಲೆ ದಡಕ್ಕೆ ಅಪ್ಪಳಿಸುತ್ತಿರುವ ಆಳೆತ್ತರ ಅಲೆಗಳು.

ಹೌದು ಹೆಚ್ಚಾಗುತ್ತಿರುವ ಮಳೆಯ ಅಬ್ಬರ ಅದರಿಂದ ಉತ್ತರಕನ್ನಡ ಜಿಲ್ಲೆಗೆ ಇಂದು ಆರೆಂಜ್ ಅಲರ್ಟ್​ ನೀಡಿದ ಹವಾಮಾನ ಇಲಾಖೆ. ಧಾರಕಾರ ಮಳೆಯಿಂದ ಸಮುದ್ರದ ಕಡಲಿನಲ್ಲಿ ಹೆಚ್ಚುತ್ತಿರುವ ಅಲೆಗಳ ಅಬ್ಬರ ದಡಕ್ಕೆ ಅಪ್ಪಳಿಸುತ್ತಿರುವ ಅಳೆತ್ತರ ಅಲೆಗಳು.

ಇದನ್ನು ಓದಿ : ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಕೋಟಿ ಕೋಟಿ ಹಣ ವಂಚನೆ: ಆರೋಪಿ ಬಂಧನ!

ವರುಣಾರ್ಭಟದಿಂದ ಮೀನುಗಾರಿಕೆಗೆ ಅಡ್ಡಿ.

ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಮಳೆಯಬ್ಬರದಿಂದ ಮೀನುಗಾರಿಕೆಗೆ ಅಡ್ಡಿ, ಭಾರಿ ಗಾಳಿ ಸಹಿತ ಮಳೆ ಆಗುತ್ತಿರುವುದರಿಂದ ಅಲೆಗೆ ಸಿಕ್ಕು ಕೊಚ್ಚಿ ಹೋಗದಂತೆ ಎತ್ತರದ ಸ್ಥಳಗಳಲ್ಲಿ ಬೋಟುಗಳ ನಿಲುಗಡೆ ಮಾಡಲಾಗಿದೆ.

ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ.

ಬೋಟು ಮತ್ತು ಬಲೆಗಳನ್ನು ದಡದಲ್ಲಿ ಸುರಕ್ಷಿತವಾಗಿ ಇರಿಸಿರುವ ಮೀನುಗಾರರು, ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ.ಮಳೆ ಮುಂದುವರೆದಿದ್ದು ಗಾಳಿಯ ಪ್ರಮಾಣ ಸ್ವಲ್ಪ ತಗ್ಗುವ ಸಾಧ್ಯತೆ ಇದೆ, ಆದ್ದರಿಂದ ಜು.22 ರಿಂದ ನಾಲ್ಕು ದಿನ ಯೆಲ್ಲೊ ಅಲರ್ಟ್​ ಘೋಷಿಸಿರುವ ಹವಾಮಾನ ಇಲಾಖೆ.

RELATED ARTICLES

Related Articles

TRENDING ARTICLES