Monday, December 23, 2024

ದೇವೇಗೌಡರೇ ಆ ಪ್ರಾಜೆಕ್ಟ್ ಮಾಡಿಸಿದ್ದು : HDKಗೆ ಡಿಕೆಶಿ ಟಾಂಗ್

ಬೆಂಗಳೂರು : ಹೆಸರೇಳದೆ ನೈಸ್ ಹಗರಣದಲ್ಲಿ ಡಿಕೆಶಿ ಅವರು ಭಾಗಿಯಾಗಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಚಾರ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಸರೂ ಹೇಳಿಕೊಳ್ಳಲಿ, ಬೇಡ ಅಂತ ಹೇಳಲ್ಲ ಎಂದು ಕುಟುಕಿದರು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೇ ಆ ಪ್ರಾಜೆಕ್ಟ್ ಮಾಡಿಸಿದ್ದು. ರಸ್ತೆಯಲ್ಲಿ ಈಗಾಗಲೇ ಓಡಾಡ್ತಿದ್ದಾರೆ. ನಾವು ದ್ವೇಷದ ರಾಜಕಾರಣ ಮಾಡಲ್ಲ. ಅಧಿಕಾರ ಇದ್ದಾಗ ತನಿಖೆ ಮಾಡಬೇಕಿತ್ತು. ನಮಗೆ ಅಭಿವೃದ್ಧಿ ಮಾತ್ರ ಬೇಕಿದೆ. ನಮಗೆ ಗೊತ್ತಿದೆ ಯಾವ ಲಿಟಿಗೇಷನ್ ಏನೆಲ್ಲಾ ಮಾತಾಡ್ತಾರೆ ಅಂತ. ಅಸೆಂಬ್ಲಿ ಇದೆ, ಕೋರ್ಟ್ ಇದೆ ಏನು ಬೇಕಾದ್ರೂ ಮಾಡಿಕೊಳ್ಳಲಿ ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ನಮ್ಮ ಮೇಲೆ ತನಿಖೆ ಮಾಡಿಸ್ತಾರಂತೆ, ನಮಗೇನು ಭಯ ಇಲ್ಲ : ಗುಡುಗಿದ ಬೊಮ್ಮಾಯಿ

ಕುಮಾರಸ್ವಾಮಿ ಹೇಳಿದ್ದೇನು?

ನೈಸ್ ಹಗರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ಸದನ ಸಮಿತಿ ರಿಪೋರ್ಟ್ ನಲ್ಲಿ ಹೇಳಿದ್ದಾರೆ. ನಾನೇನು ಮತ್ತೆ ಹೇಳೋದಕ್ಕೆ ಸಾಧ್ಯ. ಬ್ರ್ಯಾಂಡ್ ಬೆಂಗಳೂರು ಮಾಡೋದಕ್ಕೆ ಹೊರಟ್ಟಿರೋರೆ ಇದೆಲ್ಲಾ ಮಾಡಿರೋದು ಅಂತ ಹೆಸರೇಳದೇ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.

RELATED ARTICLES

Related Articles

TRENDING ARTICLES