ಬೆಂಗಳೂರು : ಬೊಮ್ಮಾಯಿಯವ್ರನ್ನ ನಾನು ಅಭಿನಂದಿಸ್ತೀನಿ. ಅವರು ಸಿಎಂ ಆಗಿದ್ದಾಗ ಕಾನೂನು ವ್ಯಾಪ್ತಿಯಲ್ಲಿ ಅಕ್ರಮಗಳನ್ನು ಕೋರ್ಟ್ ಗಳಲ್ಲಿ ಸರ್ಕಾರದ ಪರವಾಗಿ ಗೆದ್ದುಕೊಂಡು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರಿ ಪ್ರಾಪರ್ಟಿಗಳನ್ನ ಉಳಿಸಿದ್ದಾರೆ. ಆಗ ಟೋಲ್ ಗೆ ಅವಕಾಶ ಕಲ್ಪಿಸಿದ್ರು ಎಂದು ಹೊಗಳಿದರು.
ಕಾಂಕ್ರೀಟ್ ರೋಡ್ ಆಗದೇ ಟೋಲ್ ಕಲೆಕ್ಟ್ ಮಾಡೋ ಹಾಗಿರಲಿಲ್ಲ. 2012ರೊಳಗೆ ಮುಗಿಸಲು ಹೇಳಿದ್ರು. ಬೊಮ್ಮಾಯಿ ಅವಧಿಯಲ್ಲಿ ಕೇಸ್ ಕ್ಲಿಯರ್ ಆಯ್ತಲ್ಲ. ಈಗ ತರಾತುರಿಯಲ್ಲಿ ಮಾಡೋಕೆ ಹೋಗಿದ್ದಾರೆ. ಸದನದ ರಿಪೋರ್ಟ್ ನಲ್ಲಿ ಕಮಿಟಿಯವರು ಹೇಳಿದ್ದಾರೆ. 1,325 ಕೋಟಿ ಟೋಲ್ ವಾಪಾಸ್ ಪಡೆಯಬೇಕು ಅಂತ ಹೇಳಿದ್ದಾರೆ. ಈ ಬಗ್ಗೆ ಒಂದು ಚೂರಾದ್ರೂ ಹೇಳಿದ್ದಾರಾ? ಟ್ಯಾಕ್ಸ್ ಗಳಾಕಿಕೊಂಡು ಕೂತಿದ್ದಿರಲ್ಲಾ?ಎಂದು ಗುಡುಗಿದರು.
ಇದನ್ನೂ ಓದಿ : ಗಾಂಧಿ ಕೊಂದವರು ಗಾಂಧಿ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ : ಸಿದ್ದರಾಮಯ್ಯ
ನಮ್ಮ ಪರವಾಗಿ ತೀರ್ಮಾನ ಆಗಿತ್ತು
ಹೆಚ್ಚುವರಿ ಭೂಮಿ ತೆಗದುಕೊಂಡು ನೈಸ್ ರಸ್ತೆ ನಿರ್ಮಾಣ ವಿಚಾರ ಕುರಿತು ಮಾತನಾಡಿ, ಈ ಬಗ್ಗೆ ನಾವು ಕಾನೂನು ಹೋರಾಟ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಮಾನ ಆಗಿತ್ತು. ಹೆಚ್ಚುವರಿ ಭೂಮಿಯನ್ನ ಸರ್ಕಾರ ವಾಪಸ್ ಪಡೆಯಬೇಕು ಎಂದು ಹೇಳಿದರು.
ಟೋಲ್ ಬಗ್ಗೆ ಆಡಿಟ್ ಮಾಡಬೇಕು
ಟೋಲ್ ಕಲೆಕ್ಷನ್ ಬಗ್ಗೆ ಆಡಿಟ್ ಮಾಡಬೇಕು. ಸದನ ಸಮಿತಿ ವರದಿ, ಕ್ಯಾಬಿನೆಟ್ ಸಬ್ ಕಮಿಟಿ ವರದಿ, ಸುಪ್ರೀಂ ಕೋರ್ಟ್ ತೀರ್ಪು ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರದ ನಿಲುವು ಏನು ಅನ್ನೋದನ್ನ ಸ್ಪಷ್ಟಪಡಿಸಬೇಕು. ಭ್ರಷ್ಟಾಚಾರ ವಿಚಾರ ಮಾತನಾಡೋರು ಈ ಕೇಸ್ ನಲ್ಲಿ ಏನು ಆಕ್ಷನ್ ತೆಗದುಕೊಳ್ತಾರೆ ಅನ್ನೋದನ್ನ ನೋಡ್ತೀವಿ ಎಂದು ತಿಳಿಸಿದರು.