ಬೆಂಗಳೂರು: ಎನ್‌ಡಿಎ ಮತ್ತು ಯುಪಿಎ ಎರಡರ ಜೊತೆಗೂ ಜೆಡಿಎಸ್ ಸೇರೋದು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಹೆಚ್ಡಿಕೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ವಿಶ್ವಗುರು ಅಂತೆ, ವಿಶ್ವಗುರು..! : ಸಿದ್ದರಾಮಯ್ಯ
ಎನ್‌ಡಿಎ ಜೊತೆ ಮೈತ್ರಿಯ ಬಗ್ಗೆ ಕುಮಾರಸ್ವಾಮಿ ಒಲವುತೋರಿಸಿದ್ದರು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾತ್ರ ಬಿಜೆಪಿ-ಕಾಂಗ್ರೆಸ್ ಯಾವುದರ ಜೊತೆ ಸೇರೋದು ಬೇಡ ಏಕಾಂಗಿಯಾಗಿ ಸ್ಪರ್ಧೆ ಮಾಡೋಣ ಎಂದಿದ್ದಾರೆ.
ಈ ಬಗ್ಗೆ ನಿನ್ನೆಯ ಜೆಡಿಎಲ್‌ಪಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಎನ್‌ಡಿಎ ಜೊತೆ ದೋಸ್ತಿಯಿಂದ ಜೆಡಿಎಸ್‌ಗೆ ಲಾಭವಾಗುವುದರಿಂದ ಎನ್‌ಡಿಎ ಗೆ ಬೆಂಬಲ ನೀಡುಬೇಕು ಎನ್ನುವ ಕುಮಾರಸ್ವಾಮಿ ಪ್ರಸ್ತಾಪವನ್ನು ಹೆಚ್.ಡಿ ದೇವೇಗೌಡ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಏಕಾಂಗಿ ಸ್ಪರ್ಧೆಯಿಂದ ಎಷ್ಟು ಸ್ಥಾನ ಗೆಲ್ಲುತ್ತೇವೆ ಅದನ್ನ ಜನ ನಿರ್ಧರಿಸಲಿ ಎಂದಿರುವ ಮಾಜಿ ಪ್ರಧಾನಿ ದೇವೇಗೌಡರ ಅಭಿಪ್ರಾಯದಂತೆ ದೂರ ಇರಲು ನಿರ್ಧಾರಿಸಿದ್ದಾರೆ. ಹಾಗಾದರೇ ಜೆಡಿಎಸ್ ಮುಂದಿನ ನಡೆ ಏನು ಅನ್ನೋದೇ ನಿಗೂಢವಾಗಿದೆ.