Monday, December 23, 2024

ಟ್ರಾಫಿಕ್​ ಪೊಲೀಸ್ ಮೇಲೆ ಹಲ್ಲೆ ಪ್ರಮುಖ ಆರೋಪಿ ಬಂಧನ!

ಬೆಂಗಳೂರು : ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರ್ ಗೆ ಲಾಕ್ ಕ್ಲಾಂಪ್ ಹಾಕಿದ್ದ ಕಾರಣಕ್ಕೆ ಕರ್ತವ್ಯ ನಿರತ ಟ್ರಾಫಿಕ್ ಪೇದೆ ಮೇಲೆ ಮನಸ್ಸೋಇಚ್ಚೆ ಹಲ್ಲೆ ನಡೆಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಲಾಂಗ್​ ಹಿಡಿದು ಪುಡಿರೌಡಿಗಳ ಅಟ್ಟಹಾಸ!

ಹೆಚ್ .ಬಿ.ಆರ್.ಲೇಔಟ್ ನಿವಾಸಿ ಸುಲೇಮಾನ್ ಬಂಧಿತ ಆರೋಪಿ, ಅಸ್ವತ್ಥಳಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ನೋಪಾರ್ಕಿಂಗ್​ ನಲ್ಲಿ ಕಾರ್​ ಪಾರ್ಕಿಂಗ್ ಮಾಡಲಾಗಿದೆ, ಈ ವೇಳೆ ಅಲ್ಲೇ ಇದ್ದ ಟ್ರಾಫಿಕ್ ಸಿಬ್ಬಂದಿ ತನ್ನ ಕರ್ತವ್ಯದ ನಿಯಮದ ಪ್ರಕಾರ ಕಾರ್​ನ ಚಕ್ರಗಳಿಗೆ ಕ್ಲಾಂಪ್​ ಹಾಕಿದ್ದಾರೆ,

ಇದೇ ಕಾರಣಕ್ಕೆ ಆರೋಪಿ ಸುಲೇಮಾನ್​ ಮತ್ತು ಆತನ ಸ್ನೇಹಿತ ಸಾರ್ವಜನಿಕವಾಗಿ ಟ್ರಾಫಿಕ್​ ಪೊಲೀಸ್​ ಸಿಬ್ಬಂದಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆ ನಡೆಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಟ್ರಾಫಿಕ್​ ಪೊಲೀಸ್​ ನದ್ದೇ ತಪ್ಪು ಎಂದು ಬರೆಯಲಾಗಿದೆ.

ದೂರು ದಾಖಲಾದ ಹಿನ್ನೆಲೆ‌ ಪ್ರಮುಖ ಆರೋಪಿಯನ್ನ ಬಾಣಸವಾಡಿ ಪೊಲೀರು ಬಂಧಿಸಿದ್ದಾರೆ.

ಈ ಕುರಿತು ಟ್ರಾಫಿಕ್​ನ ಜಂಟಿ ಪೊಲೀಸ್​ ಆಯುಕ್ತರಾದ ಅನುಚೇಕ್​ ಟ್ವೀಟ್ ಮಾಡಿದ್ದು ಕರ್ತವ್ಯ ನಿರತ ಪೊಲೀಸ್​ ಪೋದೆ ಮೇಲೆ ಹಲ್ಲೆ ನಡೆಸಿರುವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಆತನ ಮೇಲೆ ಕ್ರಿಮಿನಲ್​ ಕೇಸ್ ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES