Sunday, December 22, 2024

ದಲಿತ ಸ್ಪೀಕರ್ ಮೇಲೆ ಅವ್ರು ಪೇಪರ್ ಎಸೆದಿದ್ದಾರೆ : ದಲಿತಾಸ್ತ್ರ ಪ್ರಯೋಗಿಸಿದ ಡಿಕೆಶಿ!

ಬೆಂಗಳೂರು : ಬಿಜೆಪಿಯವರು ದಲಿತ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೇಸರಿ ಕಲಿಗಳ ವಿರುದ್ಧ ದಲಿತಾಸ್ತ್ರ ಪ್ರಯೋಗಿಸಿದ್ದಾರೆ.

ಬಿಜೆಪಿ ಶಾಸಕರ ಅಮಾನತು ಮಾಡಿದ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರು ಹತಾಶೆಯಿಂದ ಗೂಂಡಾ ವರ್ತನೆ ತೋರಿದ್ದಾರೆ ಎಂದು ಕುಟುಕಿದ್ದಾರೆ.

ದಲಿತ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದಾರೆ. ಅವರು ಏನೇ ಮಾಡಿದ್ರು ಹತಾಶೆ ಆಗಿದ್ದಾರೆ. ದೆಲ್ಲಿಯವರು ನನ್ನ ಫೋಟೋ ತಗೊಳ್ಳಲಿ. ಬಿಜೆಪಿಯವರು ಮಹಾಭಾರತ ನಾಟಕವನ್ನೇ ತೋರಿಸಿದ್ದಾರೆ. ನೋಡೋಣ ಏನಾಗಲಿದೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ಯತ್ನಾಳ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಜೆಡಿಎಸ್ ನಿಲುವೇನು ಅಂತ ಸ್ಪಷ್ಟವಾಗಲಿ

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ಕುರಿತು ಮಾತನಾಡಿ, ಮಾಡಲಿ.. ಏನು ಮಾಡ್ತಾರೋ ನೋಡೋಣ. ಬಿಜೆಪಿ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಮಾತನಾಡಿ, ಮಾಡಲಿ.. ಎಲ್ಲರೂ ಪ್ರತಿಭಟನೆ ಮಾಡಲಿ. ಜೆಡಿಎಸ್ ನಿಲುವೇನು ಅಂತ ಇನ್ನೂ ಸ್ಪಷ್ಟವಾಗಿಲ್ಲ ಎಂದು ಚಾಟಿ ಬೀಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅವರ ಸ್ಟ್ಯಾಂಡ್ ಏನು ಅಂತ ಹೇಳಲಿ. ದೇವೇಗೌಡರು, ಇಬ್ರಾಹಿಂ ಅವರ ಅಭಿಪ್ರಾಯ ತಿಳಿಸಿಲ್ಲ. ನ್ಯಾಷನಲ್ ಲೆವೆಲ್ ಸ್ಟ್ಯಾಂಡ್ ಏನು ಅಂತ ಗೊತ್ತಾಗಬೇಕಲ್ವಾ? ಹೆಚ್.ಡಿ ಕುಮಾರಸ್ವಾಮಿ ಮಾತ್ರ ಮಾತಾಡಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES