Friday, November 22, 2024

ದಲಿತರ ವಿರುದ್ಧ ಮಾಡಿದ್ದಾರೆ ಅಂತ ಕರುಣೆ ತೋರಿಸಿದ್ದಾರೆ : ಕುಮಾರಸ್ವಾಮಿ ಕೌಂಟರ್

ಬೆಂಗಳೂರು : ದಲಿತರ ವಿರುದ್ಧ ಮಾಡಿದ್ದಾರೆ ಅಂತ ಅವ್ರು ಕರುಣೆ ತೋರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ವಿಧಾನಸಭೆ ಕಲಾಪದಲ್ಲಿ ನಡೆದ ಬೆಳವಣಿಗೆ ಏನು ಇದೆ. ಆಡಳಿತ ಪಕ್ಷದ ಉದ್ದಟತನ ನಡವಳಿಕೆ ಇದಕ್ಕೆ ಕಾರಣ ಎಂದು ಕುಟುಕಿದರು.

ಉಪಾಧ್ಯಕ್ಷರ ಸ್ಥಾನಕ್ಕೆ ಪುಟ್ಟರಂಗ ಶೆಟ್ಟಿ ಬೇಡಾ ಅಂದ ನಂತರ ಅವರಿಗೆ ಕೊಟ್ಟಿದ್ದು. ಈಗ ಅವರು ದಲಿತರು ಅಂತಗೊತ್ತಾಯ್ತ? ಈಗ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಣ್ಣ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಇದಕ್ಕಿಂತ ಕೆಟ್ಟ ಘಟನೆ ನಡೆದಿದೆ ಎಂದು ಛೇಡಿಸಿದರು.

ನಮ್ಮ ನಿರ್ಧಾರವೇ ಸರಿ ಎಂಬ ಪ್ರತಿಷ್ಠೆ

ಮಹಾಘಟಬಂಧನ್ ಸಭೆಗೆ ಬಂದವರ ಸ್ವಾಗತಕ್ಕೆ ಐಎಎಸ್ (IAS) ಅಧಿಕಾರಿಗಳ ಬಳಕೆ ಮಾಡಿದ್ದಾರೆ. ಡಿಪಿಆರ್ (DPR) ನಿಂದ ಆದೇಶ ಹೋಗಿದೆ. ನಿನ್ನೆ ಸದನದಲ್ಲಿ ಗಲಾಟೆ ನಡೆದ ನಂತರ ಸ್ಪೀಕರ್ ಕಚೇರಿಯಲ್ಲಿ ಮೀಟಿಂಗ್ ಮಾಡಿದ್ರು. ಅದರಲ್ಲಿ ನಮ್ಮ ನಿರ್ಧಾರವೇ ಸರಿ ಎಂದು ಪ್ರತಿಷ್ಠೆ ಮಾಡಿದ್ರು. ಎರಡು ನಿಮಿಷಗಳಲ್ಲಿ ಬಗೆಹರಿಸಿಕೊಳ್ಳಬಹುದಾಗಿತ್ತು ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ದಲಿತ ಸ್ಪೀಕರ್ ಮೇಲೆ ಅವ್ರು ಪೇಪರ್ ಎಸೆದಿದ್ದಾರೆ : ದಲಿತಾಸ್ತ್ರ ಪ್ರಯೋಗಿಸಿದ ಡಿಕೆಶಿ!

ಮೈಕ್ ಕಿತ್ತುಕೊಂಡ ಘಟನೆಯೂ ಆಗಿದೆ

ಮಧ್ಯಾಹ್ನ ಭೋಜನಕ್ಕೂ ಬಿಡದೆ ಸ್ಪೀಕರ್ ಊಟಕ್ಕೆ ಎಂದು ಹೋದ್ರು. ಎಷ್ಟು ಬಾರಿ ಪೇಪರ್ ಹಾಕಿಲ್ಲ, ಮೈಕ್ ಕಿತ್ತುಕೊಂಡ ಘಟನೆ ಆಗಿದೆ. ಇನ್ನು ಮುಂದೆ ಈ ರೀತಿ ಮಾಡಲ್ಲ ಎಂದು ಹೇಳಬಹುದಾಗಿತ್ತು. ನಂತರ ಸದನ ಆರಂಭ ನಂತರ ದೇಶದ್ರೋಹ ಮಾಡಿದ್ದಾರೆ ಎಂದು ಹೇಳಿದ್ರು ಎಂದು ಕಿಡಿಕಾರಿದರು.

ನಾನು IAS ಅಧಿಕಾರಿಗಳ ಬಳಕೆ ಮಾಡಿಲ್ಲ

ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಅಧಿಕಾರಗಳ ಬಳಕೆ ವಿಚಾರ ಕುರಿತು ಮಾತನಾಡಿ, ನಾನು ಅದಕ್ಕೆ ಯಾರನ್ನು ಐಎಎಸ್ (IAS) ಅಧಿಕಾರಿಗಳ ಬಳಕೆ ಮಾಡಿಲ್ಲ. ಅಂದು ಡಿಪಿಆರ್(DPR) ಮತ್ತು ರಾಜ್ಯಪಾಲರ ವ್ಯವಸ್ಥೆ ಮಾಡಿದ್ದು. ನನಗೆ ಗೊತ್ತಿರುವ ಹಾಗೆ ಅಲ್ಲಿ ಯಾವುದೇ ಅಧಿಕಾರಿಗಳ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES