Monday, December 23, 2024

NDAನೂ ಇಲ್ಲ, UPAನೂ ಇಲ್ಲ.. ! : ಗೊಂದಲಕ್ಕೆ ತೆರೆ ಎಳೆದ ದೇವೇಗೌಡ

ಬೆಂಗಳೂರು : NDAನೂ ಇಲ್ಲ, INDIA(UPA)ನೂ ಇಲ್ಲ..! ಸ್ವತಂತ್ರವಾಗಿ ಹೋರಾಟ ಮಾಡ್ತೇವೆ ಎನ್ನುವ ಮೂಲಕ ಎಲ್ಲಾ ಗೊಂದಲಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತೆರೆ ಎಳೆದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಲಾಭ ಮತ್ತು ತೋರಿಕೆಗಾಗಿ ಹೇಳುತ್ತಿಲ್ಲ. ಜೀವನದ್ದುಕ್ಕೂ ಹೋರಾಟ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.

ನಾಳೆ ವಿಧಾನಸಭೆ ಕಲಾಪ ಮುಗಿಯುತ್ತೆ. ನಮ್ಮದು ಪ್ರಾದೇಶಿಕ ಪಕ್ಷ. ವಿಧಾನಸಭೆ ಸದಸ್ಯರು ಎಲ್ಲಾ ಸೇರಿ ಇಂದು ಸಭೆ ಮಾಡಿದ್ದಾರೆ. ಪ್ರಾದೇಶಿಕ ಪಕ್ಷುಳಿಸುವ ನಿಟ್ಟಿನಲ್ಲಿ ಚರ್ಚೆ ಆಗಿದೆ. ನಾನು ಎಲ್ಲರ‌ನ್ನು ಭೇಟಿ ಮಾಡಿ ಮುಂದೆ ಯಾವ ಮಾರ್ಗದಲ್ಲಿ ಹೋಗಬೇಕು ಅನ್ನೋ ಸಲಹೆ ನೀಡಿದ್ದೇನೆ ಎಂದರು.

ಇದನ್ನೂ ಓದಿ : ಮೋದಿ ವಿಶ್ವಗುರು ಅಂತೆ, ವಿಶ್ವಗುರು..! : ಸಿದ್ದರಾಮಯ್ಯ

ಒಂದು ಕಡೆ ಎನ್ ಡಿಎ, ಮತ್ತೊಂದು ಕಡೆ ಇಂಡಿಯಾ. ಹೀಗಾಗಿ, ನನಗಿರುವ ಅನುಭವವನ್ನು ಅವರ ಬಳಿ ಹಂಚಿಕೊಂಡಿದ್ದೇನೆ. ಕುಮಾರಸ್ವಾಮಿ ಪಕ್ಷದ ನಾಯಕರಾಗಿದ್ದಾರೆ. ಹೊಣೆ ಹೊತ್ತು ಕೆಲಸ ಮಾಡುತ್ತಿದ್ದಾರೆ. ನನ್ನ ಅನುಭವವನ್ನು ಅವರಿಗೂ ಹೇಳಿದ್ದೇನೆ. ಜೊತೆಗೆ, ಈಗಲೂ ಸಲಹೆ ನೀಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಸಾಮರ್ಥ್ಯ ಸಾಬೀತು ಮಾಡ್ತೇವೆ

ರಾಷ್ಟ್ರದ ರಾಜಕಾರಣದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಈ ಪಕ್ಷ ಉಳಿಸೋದು ರಾಜ್ಯದ ಜನರ ಹಿತದೃಷ್ಟಿಯಿಂದ ಅಗತ್ಯ. ನಮ್ಮ ಪಕ್ಷಕ್ಕಾಗಿರೋ ಅನ್ಯಾಯ ಅದೆಲ್ಲವನ್ನು ಜನರೆ ಮುಂದೆ ಇಟ್ಟು, ಕರ್ನಾಟಕದಲ್ಲಿ ಸಾಮಾರ್ಥ್ಯ ಇದೆ ಅನ್ನೋದನ್ನು ಸಾಬೀತು ಮಾಡ್ತೇವೆ ಎಂದು ದೇವೇಗೌಡರು ತಿಳಿಸಿದರು.

RELATED ARTICLES

Related Articles

TRENDING ARTICLES