Wednesday, January 22, 2025

ಮೋದಿ ವಿಶ್ವಗುರು ಅಂತೆ, ವಿಶ್ವಗುರು..! : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿಯವರು ನರೇಂದ್ರ ಮೋದಿಯನ್ನು ವಿಶ್ವಗುರು ಅಂತಾರೆ. ಇದೇನಾ ನಿಮ್ಮ ವಿಶ್ವಗುರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇವತ್ತು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆ ಕೇಳುವುದಕ್ಕೂ ಬಿಜೆಪಿಯ ಯಾವೊಬ್ಬ ಶಾಸಕರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿಯರಿಗೆ ವಿಪಕ್ಷ ನಾಯಕರನ್ನೂ ನೇಮಕ ಮಾಡಲು ಆಗುತ್ತಿಲ್ಲ. ನರೇಂದ್ರ ಮೋದಿ ವಿಶ್ವಗುರು ಅಂತೆ, ಇದೇನಾ ವಿಶ್ವಗುರು? ವಿಶ್ವಗುರುವಿಗೆ ವಿಪಕ್ಷ ನಾಯಕ ಸಿಗುತ್ತಿಲ್ಲ. ನಮ್ಮ ನಾಯಕರೂ ಇದ್ದಾರೆ. ಆದರೆ, ನಾವು ಆ ರೀತಿ ಹೊಗಳಲ್ಲ. ನರೇಂದ್ರ ಮೋದಿ ಎಲ್ಲೆಲ್ಲಿ ಹೋಗಿದ್ರೋ,ಅಲ್ಲೆಲ್ಲಾ ನಾವೇ ಗೆದ್ದಿದ್ದೇವೆ ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ಕಾಂಗ್ರೆಸ್ ತೊಲಗೋ ವರೆಗೂ ಬರಗಾಲ ಹೋಗಲ್ಲ : ಸಿ.ಟಿ ರವಿ

ನಾನು 43 ಸಾವಿರ ಅಂತರದಿಂದ ಗೆದ್ದಿದ್ದೇನೆ

ಮೋದಿ ಹೋಗಿದ್ದ ಕಡೆ ನಮ್ಮವರು ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ವರುಣಾದಲ್ಲಿ ನಾನು 43 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ನಂಜನಗೂಡು ಶಾಸಕರು 47 ಸಾವಿರ ಮತಗಳಿಂದ ಗೆದ್ದಿದ್ದಾರೆ. ಕೇಶವಕೃಪಾದವರು ಇವ್ರನ್ನ ನೋಡ್ತಾ ಇದ್ದಾರೆ. ಅದಕ್ಕೆ ಇಲ್ಲಿ ನಾಟಕ ಮಾಡ್ತಾ ಇದ್ದಾರೆ ಎಂದು ಕುಟುಕಿದರು.

ಅವ್ರು ಮೋದಿ ಗೆಲ್ಲಿಸ್ತಾರೆ ಅಂತ ಕೊಂಡಿದ್ದಾರೆ

ಅವ್ರು ಏನೇ ಮಾಡಿದ್ರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ. ಬಿಜೆಪಿಗೆ ಶೇ.36 ರಷ್ಟು  ಮಾತ್ರ ವೋಟ್ ಬಂದಿರೋದು. ನಮಗೆ ಶೇ. 42.9 ರಷ್ಟು ವೋಟಿಂಗ್ ಬಂದಿದೆ. ಮೋದಿ ಗೆಲ್ಲಿಸ್ತಾರೆ ಅಂತ ಕೊಂಡಿದ್ದಾರೆ. ಅವ್ರು ಮೋದಿ ಮೇಲೆ ಡಿಫೆಂಡ್ ಆಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.

RELATED ARTICLES

Related Articles

TRENDING ARTICLES