ಬೆಂಗಳೂರು: ಡೆಪ್ಯುಟಿ ಸ್ಪೀಕರ್ ಮೇಲೆ ಪೇಪರ್ ಎಸೆತದ್ದು,ಸದನದಲ್ಲಿ ಅಸಭ್ಯ ವರ್ತನೆ ಮಾಡಿರುವುದ ಬಿಜೆಪಿಯ 10 ಶಾಸಕರನ್ನ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ಸ್ಷೀಕರ್ ಯು.ಟಿ ಖಾದರ್ ಘೋಷಣೆ ಮಾಡಿದ್ದಾರೆ.
ಹೌದು, ರಾಜಕೀಯ ವ್ಯಕ್ತಿಗಳ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಬಿಜೆಪಿ ಸದಸ್ಯರು ಮಸೂದೆಗಳ ಪ್ರತಿಗಳನ್ನು ಹರಿದು ಪೀಠದಲ್ಲಿದ್ದ ಉಪ ಸಭಾಧ್ಯಕ್ಷರ ಮೇಲೆ ಸೆದಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು.
ಅಮಾನತು ಆದ ಶಾಸಕರು ಯಾರ‍್ಯಾರು
ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ಆರ್ ಅಶೋಕ್, ಉಮಾಪತಿ ಕುಟ್ಯಾನ್,ಕಾಮತ್,ಡಾ.ಸಿ.ಎನ್ ಅಶ್ವಥ್ ನಾರಾಯಣ್, ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್, ದೀರಜ್ ಮುನಿರಾಜು, ಯಶ್ ಪಾಲ್ ಸುವರ್ಣ ಕೋಟ್ಯಾನ್ ಸೇರಿದಂತೆ 10 ಮಂದಿ ಅಮಾನತು ಮಾಡಿದ್ದಾರೆ.