Friday, January 10, 2025

ಕಾಂಗ್ರೆಸ್ ಬಂದ್ಮೇಲೆ ಕೆಟ್ಟ ಹುಳಗಳು ಹೊರಗೆ ಬರ್ತಿವೆ : ಪ್ರಮೋದ್ ಮುತಾಲಿಕ್

ಧಾರವಾಡ : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿ ಕೆಟ್ಟ‌ ಹುಳಗಳು ಹೊರಗೆ ಬರುತ್ತಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಕೆಟ್ಟ ಹುಳಗಳಿಗೆ ಕಾಂಗ್ರೆಸ್ ಪೋಷಣೆ ನೀಡುತ್ತಿದೆ. ಹೀಗಾಗಿ, ಈ ಹಾವು-ಚೇಳು ಹೊರ ಬರುತ್ತಿವೆ ಎಂದು ಕುಟುಕಿದರು.

ಬೆಂಗಳೂರು ಸಿಸಿಬಿ ಪೊಲೀಸರು ಐವರು ಉಗ್ರರನ್ನು ಬಂಧಿಸಿದ್ದಾರೆ. ಅವರ ಬಳಿ ಸೆಟಲೈಟ್ ಫೋನ್, ಪಿಸ್ತೂಲ್ ಹಾಗೂ ಜೀವಂತ ಗುಂಡು ಸಿಕ್ಕಿವೆ. ಇವರ ಜೊತೆ ಇಬ್ಬರು ಮಹಿಳೆಯರು ಇದ್ದರು ಎಂಬ ಉಲ್ಲೇಖ ಕೂಡ ಮಾಡಲಾಗುತ್ತಿದೆ. ಲಕ್ಷಾಂತರ ಜನರನ್ನು ಕೊಂದಿರುವ ಲಷ್ಕರ್-ಎ-ತೈಬಾ ಸಂಪರ್ಕದಲ್ಲಿ ಇದ್ದವರು‌ ಇವರೆಲ್ಲ ಎಂದು ಗುಡುಗಿದರು.

ಇದನ್ನೂ ಓದಿ : ಡಬಲ್ ಮರ್ಡರ್ ಮಾಡಿ ಸಿನಿಮಾ ಸ್ಟೈಲ್ ನಲ್ಲಿ ಬಿಲ್ಡಪ್ ಕೊಟ್ಟಿದ್ದ ಫಿಲಿಕ್ಸ್ ಬಂಧನ

ಮುಸ್ಲಿಂ ಭೂಗತ ವ್ಯಕ್ತಿಗಳು ಇದಾರೆ

ಹಿಂದೆ ಹರ್ಷನ ಕೊಲೆ ನಡೆದಾದ ಜೈಲಿನಲ್ಲಿ ಇದ್ದುಕೊಂಡೇ ಫೋನ್ ಸಂಪರ್ಕ ಮಾಡಿದ್ದನ್ನು ನಾನು ನೆನಪು ಮಾಡಿಕೊಳ್ತೇನೆ. ಜೈಲಿನಲ್ಲಿ ಪಾಕಿಸ್ತಾನಿ, ಅಪಘಾನಿಸ್ತಾನಿ ಹಾಗೂ ಟೆರರಿಸ್ಟ್ ಇದ್ದಾರೆ. ಕೊಲೆಗಡುಕರು, ಮುಸ್ಲಿಂ ಭೂಗತ ವ್ಯಕ್ತಿಗಳು ಇದಾರೆ. ಸರ್ಕಾರದ ನಿರ್ಲಕ್ಷದಿಂದ ಈ‌ ರೀತಿ ಕೆಲಸ ನಡೆದಿವೆ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕೂಡಾ ಕಾರಣ ಎಂದು ವಾಗ್ದಾಳಿ ನಡೆಸಿದರು.

ಮಲೆನಾಡಿನಲ್ಲಿ ಉಗ್ರ ಕೃತ್ಯಕ್ಕೆ ಪ್ಲಾನ್

ಮಲೆನಾಡಿನಲ್ಲಿ ಉಗ್ರ ಕೃತ್ಯಕ್ಕೆ ಪ್ಲಾನ್ ನಡೆಯುತ್ತಿದೆ. ಬೆಂಗಳೂರು ಸುಲ್ತಾನ್ ಪಾಳ್ಯದಲ್ಲಿ ಅಷ್ಟೇ ಅಲ್ಲ, ಚಾಮರಾಜನಗರದಲ್ಲಿ ಉಗ್ರರು ಇದ್ದಾರೆ. ಕೋವಿಡ್ ಸಮಯದಲ್ಲಿ ವೈದ್ಯರನ್ನು ಇವರು ಒಳಗೆ ಹೋಗಲು ಬಿಡಲಿಲ್ಲ, ಇದೇ ಕಾರಣಕ್ಕೆ‌ ಇವರು ಬಿಡಲಿಲ್ಲ. ಡಿಜೆ ಹಳ್ಳಿ ಕೆಜೆ ಹಳ್ಳಿ, ಹುಬ್ಬಳ್ಳಿ ಹಾಗೂ ಮೈಸೂರು ಘಟನೆಯ ಎಲ್ಲವೂ ಉಗ್ರ ಕೃತ್ಯಗಳೇ. ಈ ರಾಜಕಾರಣಿಗಳು ತಮ್ಮ ಅಧಿಕಾರ ದಾಹದಿಂದ ಜನರ ಬಲಿ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES