Monday, December 23, 2024

ಸದನದಲ್ಲಿ ಕುಸಿದು ಬಿದ್ದ ಶಾಸಕ ಯತ್ನಾಳ್

ಬೆಂಗಳೂರು : ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಬಿಲ್‌ ಪ್ರತಿಯನ್ನು ಹರಿದು ಹಾಕಿದ ಬಿಜೆಪಿಯ ಒಟ್ಟು ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಮಾರ್ಷಲ್​ಗಳು ಶಾಸಕರನ್ನು ಹೊರ ಹೊಕಿದ್ದಾರೆ.

ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅಸ್ವತ್ತತಾಗಿದ್ದಾರೆ. ಬಿಪಿ ಹೆಚ್ಚಾಗಿ ಕುಸಿದು ಶಾಸಕ ಯತ್ನಾಳ್ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಸದನದಿಂದ ಮಾರ್ಷಲ್ಸ್ ಶಾಸಕ ಯತ್ನಾಳ್​ ಅವರನ್ನು ಎಳೆದೊಯ್ದಿದ್ದಾರೆ. ಈ ವೇಳೆ ಯತ್ನಾಳ್ ದಿಢೀರ್ ಕುಸಿದು ಬಿದ್ದಿದ್ದಾರೆ. ಇದೇ ವೇಳೆ ಸಿದ್ದು ಸವದಿಯನ್ನು ಮಾರ್ಷಲ್ಸ್ ಎತ್ತಿ ಹೊರ ಹಾಕಲು ಹೋದರು. ಆಗ ವಿಧಾನಸಭಾ ಕಾರ್ಯದರ್ಶಿ, ಅವರು ಸಸ್ಪೆಂಡ್ ಆಗಿಲ್ಲ ಎಂದರು. ಆಗ ಮಾರ್ಷಲ್ಸ್ ಹಾಗೆಯೇ ವಾಪಾಸ್ ತಂದು ಬಿಟ್ಟರು.

ವಿಧಾನಸಭೆಯಿಂದ ಅಮಾನತುಗೊಂಡವರನ್ನು ಮಾರ್ಷಲ್ಸ್‌ ಹೊರಹಾಕಿದರು. ಮತ್ತೊಂದೆಡೆ ಸದನದಲ್ಲಿ  ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಸ್ಪೀಕರ್‌ ಕಚೇರಿ ಮೆಟ್ಟಿಲು ಮೇಲೆ ಕುಳಿತು ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES