Monday, January 27, 2025

ಕೌಟುಂಬಿಕ ಕಲಹ ಹಿನ್ನಲೆ ಪತ್ನಿಯನ್ನೇ ಕೊಂದ ಪತಿ

ಕೋಲಾರ : ಕೌಟುಂಬಿಕ ಕಲಹ ಹಿನ್ನಲೆ ಪತಿಯೇ ತನ್ನ ಪತ್ನಿಯನ್ನು ಕೊಲೆಗೈದಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ರಾಜೀವ್ ನಗರದಲ್ಲಿ ನಡೆದಿದೆ.

ಶಹನಾಜ್ (30) ಪತಿಯಿಂದ ಕೊಲೆಯಾದ ಮಹಿಳೆ. ರಫೀಕ್ (40) ಕೊಲೆ ಮಾಡಿರುವ ಪತಿ. ಆರೋಪಿ ರಫೀಕ್ ಜೆಸಿಬಿ ಆಪರೇಟರ್ ಆಗಿದ್ದನು. ಹತ್ಯೆಗೈದ ಬಳಿಕ ಆರೋಪಿ ರಫೀಕ್ ಪರಾರಿಯಾಗಿದ್ದಾನೆ.

ಮಂಗಳವಾರ(ಜುಲೈ 18) ತಡರಾತ್ರಿ ಕೊಲೆ ನಡೆದಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹ ಹಿನ್ನಲೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ವರದಕ್ಷಿಣೆ ಆಸೆಗೆ ಪತ್ನಿಯನ್ನೇ ಕೊಂದ ಪಾಪಿ ಪತಿ

ಮಗನ ಎದುರೇ ತಂದೆ ಸಾವು

ಬಂಡೆ ಕೆಲಸ ಮಾಡುವ ವೇಳೆ ಮಗನ ಎದುರೇ ತಂದೆ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹುಣಸಿಕೋಟೆ ಬಳಿ ನಡೆದಿದೆ.

ಬಂಗಾರಪೇಟೆಯ ಕಲ್ಲು ಕಾರ್ಮಿಕ ನಾರಾಯಣಪ್ಪ (52) ಸಾವನ್ನಪ್ಪಿರುವ ವ್ಯಕ್ತಿ. ಅಕ್ರಮವಾಗಿ ಬಂಡೆ ಒಡೆಯುವ ವೇಳೆ ಬಂಡೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಹಾಗೂ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES