Thursday, January 23, 2025

ಹಾಸ್ಟೇಲ್ ಹುಡುಗರು ಚಿತ್ರ ತಂಡದ ವಿರುದ್ಧ ಸಿಡಿದೆದ್ದ ರಮ್ಯಾ

ಬೆಂಗಳೂರು : ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾ ಒಂದರಲ್ಲಿ ನಟಿ ರಮ್ಯಾ ಅವರ ಅನುಮತಿ ಇಲ್ಲದೆ ವಿಡೀಯೊಗಳನ್ನು ಬಳಸಿಕೊಂಡಿರುವುದಕ್ಕೆ ನಟಿ ರಮ್ಯಾ ನೋಟಿಸ್ ನೀಡಿದ್ದಾರೆ.

ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಹಾಸ್ಟೇಲ್ ಹುಡುಗರು ಚಿತ್ರದ ಟ್ರೇಲರ್​ನಲ್ಲಿ ಮೋಹಕ ತಾರೆ ರಮ್ಯಾ ಲೆಕ್ಚರರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ಚಿತ್ರತಂಡಕ್ಕೆ ರಮ್ಯಾ ಶಾಕ್ ಕೊಟ್ಟಿದ್ದಾರೆ.

ಇದನ್ನು ಓದಿ : ರೈತರ ನಿದ್ದೆಗೆಡಿಸಿದ ಕಳ್ಳರು : 20 ಪಂಪಸೆಟ್ ವೈರ್, ಸ್ಟಾಟರ್ ಕಳ್ಳತನ

ಚಿತ್ರ ತಂಡಕ್ಕೆ ನೋಟಿಸ್

ಹಾಸ್ಟೇಲ್ ಹುಡುಗರು ಚಿತ್ರ ತಂಡದವರು ನಟಿ ರಮ್ಯಾ ಅವರ ಅನುಮತಿ ಇಲ್ಲದೆ ಅವರ ವಿಡಿಯೋಗಳನ್ನು ಮತ್ತು ಇತರೆ ದೃಶ್ಯ, ಮತ್ತಿತರ ಕಂಟೆಟ್​ಗಳನ್ನು ಬಳಸಿಕೊಂಡಿದ್ದಾರೆ ಎಂದು ರಮ್ಯಾ ಅವರು ಆರೋಪಿಸಿದ್ದಾರೆ. ಅಲ್ಲದೆ, ಹಾಸ್ಟೆಲ್ ಹುಡುಗರು ಚಿತ್ರದ ತಂಡಕ್ಕೆ ನೋಟಿಸ್ ಕಳುಹಿಸಿದ್ದಾರೆ.

ಜು.21ಕ್ಕೆ ಚಿತ್ರ ರೀಲಿಸ್

ತಮ್ಮ ಅನುಮತಿ ಇಲ್ಲದೆ ಯಾವುದೇ ದೃಶ್ಯ ಬಳಸಬಾರದು. ದೃಶ್ಯ, ಸುದ್ದಿ ಮತ್ತಿತರ ಕಂಟೆಂಟ್ ಗಳನ್ನು ತೆಗೆದುಹಾಕಬೇಕು. 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ರಮ್ಯಾ ನೋಟಿಸ್ ನಲ್ಲಿ ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES