ಚಿಕ್ಕಮಗಳೂರು : ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದು ವೃದ್ಧೆ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನದಾರದಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ದೇವಮ್ಮ (61 ) ಮೃತ ವೃದ್ಧೆ.
ಇಂದು ಬೆಳಗ್ಗೆ ಗದ್ದೆಗೆ ತೆರಳುವಾಗ ವೃದ್ಧೆ ಕಾಲು ಜಾರಿ ಹೇಮಾವತಿ ನದಿಗೆ ಬಿದ್ದಿದ್ದರು. ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗಿದ್ದರು. ನದಿಯ ದಡದಲ್ಲಿ ವೃದ್ಧೆ ಶವ ಪತ್ತೆಯಾಗಿದ್ದು, ಶವವನ್ನು ಸ್ಥಳೀಯರು ಮೇಲಕ್ಕೆತ್ತಿದ್ದಾರೆ. ಘಟನಾ ಸ್ಥಳಕ್ಕೆರ ಮೂಡಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉಕ್ಕಿ ಹರಿಯುತ್ತಿರುವ ಕುಬ್ಜಾ ನದಿಗೆ ಬಿದ್ದು ಅರ್ಚಕ ಸಾವು
ಮಳೆ ಇಲ್ಲದೇ ರೈತರು ಕಂಗಾಲು
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಸಾಲಸೂಲ ಮಾಡಿ ಹೊಲಗಳಲ್ಲಿನ ಹೆಂಟೆಗಳನ್ನ ಕುಂಟೆಯಿಂದ ಸಮಮಾಡಿ ಬೀಜಗೊಬ್ಬರ ಹಾಕಿ ಬಿತ್ತಿದ ಬೆಳೆ ಭೂಮಿಯಿಂದ ಮೇಲೆ ಬಂದಿಲ್ಲ. ಮತ್ತೆ ಕೆಲವೆಡೆ ಬಿತ್ತಲಿಕ್ಕೆ ತಯಾರಿ ಮಾಡಿಕೊಂಡಿದ್ರು ಮುಂಗಾರು ಮಳೆ ಮಾತ್ರ ಮರಿಚೀಕೆಯಾಗಿದೆ.
8 ಎಕರೆಯಲ್ಲಿ ಹೆಸರು ಬಿತ್ತನೆ
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಾಡಿಕೆಯಷ್ಟು ಮಳೆಯಾಗಿಲ್ಲ. ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ ರೈತ ಕಂಗಲಾಗಿದ್ದಾನೆ. ಬಾಗಲಕೋಟೆ ರೈತ ಶೇಖಪ್ಪ ಮಂಕಣಿ ತಮ್ಮ 8 ಎಕರೆ ಭೂಮಿಯಲ್ಲಿ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದರು. ಈ ಕುರಿತು ರೈತ ಶೇಖಪ್ಪ ಮಂಕಣಿ ತಮ್ಮ ಅಳಲು ತೋಡಿಕೊಂಡಿದ್ದಾರೆ.