Monday, December 23, 2024

ಸಿಂಗಾಪುರ ಬರ್ತದಾ? ಮಂಗಾಪುರ ಬರ್ತದಾ? : ಡಿಕೆಶಿಗೆ ಆರ್. ಅಶೋಕ್ ಕೌಂಟರ್

ಬೆಂಗಳೂರು : ಹಿಂದೆಯೂ ಡಿ.ಕೆ ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ರು. ಆಗ ಸಿಂಗಾಪುರ ಮಾಡ್ತೀನಿ ಅಂದಿದ್ರು, ನಾವು ನೋಡ್ತಿದ್ದೇವೆ. ಸಿಂಗಾಪುರ ಬರ್ತದಾ? ಮಂಗಾಪುರ ಬರ್ತದಾ ಎಂದು ಮಾಜಿ ಸಚಿವ ಆರ್. ಅಶೋಕ್ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು ಟೆರರಿಸ್ಟ್ ಅಡ್ಡಾ ಆಗಿದೆ. ಎನ್​ಐಎ (NIA) ತಂಡ ಬೆಂಗಳೂರಿಗೆ ಬರಬೇಕು, ಬೆಂಗಳೂರು ರಕ್ಷಣೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

I.N.D.I.A ಇಂಡಿಯಾ ಅಲ್ಲ, ಈಸ್ಟ್ ಇಂಡಿಯಾ ಕಂಪನಿ ಅದು. ಲಾಲೂ ಪ್ರಸಾದ್ ಯಾದವ್ ಜೈಲ್​ನಲ್ಲಿ ಇರುವವರು. ಅವರಿಗೂ ಐಎಎಸ್ (IAS) ಅಧಿಕಾರಿ ನೇಮಕ ಮಾಡಿದ್ರಿ. ನಿನ್ನೆ ಜೈಲ್ ಹಾಗೂ ಬೇಲ್​ನಲ್ಲಿ ಇರುವವರಿಗೆ ಅಧಿಕಾರಿಗಳನ್ನು ನೇಮಕ ಮಾಡಿದ್ರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪೇ ಸಿಎಂ (Pay CM) ಅಂದ್ರು, ಈಗ‌ ಏನೂ ಇಲ್ಲ. 4 ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನು ಎಟಿಎಂ (ATM) ಮಾಡಲಾಗುತ್ತಿದೆ. ಪೋಲೀಸ್ ಸ್ಟೇಷನ್​ನಲ್ಲಿ ಕುರಾನ್ ಹಂಚಿಕೆ ಮಾಡಲಾಗಿದೆ. ವರದಿ ಬಂದ ನಂತರ ಯಾವ ಸ್ಟೇಷನ್ ಎಂದು ಹೇಳ್ತೇನೆ ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES