ಬೆಂಗಳೂರು : ಕಾಂಗ್ರೆಸ್ ಸೇಡಿನ ರಾಜಕೀಯ ಮಾಡ್ತಿದೆ. ದಮನಕಾರಿ ನೀತಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪೀಕರ್ ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ನಾವು ನ್ಯಾಯವನ್ನು ಕೇಳಿದ್ವಿ, ಆದ್ರೆ ಕೊಡ್ಲಿಲ್ಲ. ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೆ ಹೋಗಿ ಬಂದಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಹರಾಜಾಗಿದೆ. ಜುಲೈ 17, 18 ರಂದು ಕಾಂಗ್ರೆಸ್ ರಾಜಕೀಯ ಸಭೆಯಲ್ಲಿ ಅಧಿಕಾರ ದುರುಪಯೋಗ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಕಡು ಭ್ರಷ್ಟಾಚಾರಿಗಳ ಸಮ್ಮಿಲನ : ಪ್ರಧಾನಿ ಮೋದಿ
ಮಾನ ಮರ್ಯಾದೆ ಬಿಟ್ಟು ದುರ್ಬಳಕೆ
ಮಾನ ಮರ್ಯಾದೆ ಬಿಟ್ಟು ಪ್ರಿನ್ಸಿಪಲ್ ಸೆಕ್ರೆಟರಿಯಂಥ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರನ್ನು ರಾಜ್ಯ ಅಭಿವೃದ್ದಿ ಮಾಡಲು ಜನ ಆರಿಸಿ ಕಳಿಸಿದ್ದಾರೆ. ಹಿಂದೆಂದೂ ಕೇಳರಿಯದಂಥ ಸೇವಕರಂತೆ ಐಎಎಸ್ ಅಧಿಕಾರಿಗಳನ್ನು ಎಲ್ಲೂ ನೇಮಕ ಮಾಡಿಲ್ಲ. ಪ್ರೊಟೋಕಾಲ್ ಅಧಿಕಾರಿಗಳನ್ನ ಬಿಟ್ಟು ಇವ್ರನ್ನು ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಕೊಲೆಗಳು ಆಗುತ್ತಿವೆ. ಆ ಬಗ್ಗೆ ಗಮನ ಇಲ್ಲ. ಇದನ್ನೆಲ್ಲಾ ಬಿಟ್ಟು ರಾಜಕೀಯ ವ್ಯಕ್ತಿಗಳಿಗೆ ರಾಜಮರ್ಯಾದೆ ಕೊಟ್ಟಿರೋದು ಖಂಡನೀಯ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.