Monday, December 23, 2024

INDIA ಅಂದ್ರೆ BJP, INDIA ಅಂದ್ರೆ ಮೋದಿ ಎನ್ನುವಂತಾಗಿದೆ : ರಾಹುಲ್ ಗಾಂಧಿ

ಬೆಂಗಳೂರು : INDIA ಅಂದ್ರೆ BJP, INDIA ಅಂದ್ರೆ ನರೇಂದ್ರ ಮೋದಿ ಎನ್ನುವಂತಾಗಿದೆ. ಇದನ್ನು ಬದಲಿಸುವುದೇ ನಮ್ಮ ಒಕ್ಕೂಟದ ಗುರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಮಹಾಘಟಬಂಧನ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಿದ್ಧಾಂತ ದೇಶಕ್ಕೆ ಮಾರಕವಾಗಿದೆ. ಈ ಹೋರಾಟ ಬಿಜೆಪಿ ವಿರುದ್ಧ ಮಾತ್ರವಲ್ಲ. ಸುರಕ್ಷಿತ ಭಾರತಕ್ಕಾಗಿ ನಮ್ಮ ಹೋರಾಟ. ಅದಕ್ಕಾಗಿ ನಮ್ಮ ಸಂಘಟನೆಗೆ INDIA ಎಂದು ಹೆಸರಿಟ್ಟಿದ್ದೇವೆ ಎಂದರು.

ದೇಶದ ಸಂಪತ್ತು ಕೆಲವರಿಗೆ ಮಾತ್ರ ಸೀಮಿತವಾಗುತ್ತಿದೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ವಿಪಕ್ಷಗಳೆಲ್ಲಾ ಒಂದಾಗಿದ್ದೇವೆ. ನಮ್ಮ ಮನವಿಗೆ ವಿಪಕ್ಷಗಳ ನಾಯಕರು ಸ್ಪಂದಿಸಿದ್ದಾರೆ. ನಾವು ಭಾರತದ ಪ್ರಜಾಪ್ರಭುತ್ವವನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದೇವೆ  ಎಂದು ತಿಳಿಸಿದರು.

ಇದನ್ನೂ ಓದಿ : ದೇಶಕ್ಕೆ ಮೋದಿ ಬೇಕು, ಇಲ್ಲವಾದ್ರೆ ನಮ್ಮ ರಾಜ್ಯ ತಾಲಿಬಾನ್ ಆಗುತ್ತೆ : ಪ್ರಮೋದ್ ಮುತಾಲಿಕ್

ಇಂಡಿಯಾ-ಮೋದಿ ನಡುವಿನ ಸಮರ

ಬಿಜೆಪಿಯವರು ದೇಶದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ದೇಶದ ಜನರ ಧ್ವನಿ ಅಡಗುಸುತ್ತಿರುವವರ ವಿರುದ್ಧವೇ ನಮ್ಮ ಸಮರವಾಗಿದೆ. ಈ ಯುದ್ದ ಇಂಡಿಯಾ ಮತ್ತು ಎನ್​ಡಿಎ ನಡುವೆ ನಡೆಯಲಿದೆ. ಇಂಡಿಯಾ ಮತ್ತು ಮೋದಿ ನಡುವಿನ ಸಮರ ಇದಾಗಿದೆ. ಇಂಡಿಯಾ ವಿರುದ್ಧ ಯಾರೇ ಸಮರ ಸಾರಿದರೂ ಅದರ ಪರಿಣಾಮ ಏನಾಗುತ್ತೆ ನಿಮಗೇ ಗೊತ್ತು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.

RELATED ARTICLES

Related Articles

TRENDING ARTICLES