Monday, December 23, 2024

ಸೀಮೆಎಣ್ಣೆ ಸುರಿದು ಹೆತ್ತ ಮಗನನ್ನೇ ಕೊಂದ ತಾಯಿ!

ಬೆಂಗಳೂರು: ನಿತ್ಯ ಕುಡಿದು ಬಂದು ಹಿಂಸೆ ನೀಡುತ್ತಿದ್ದ ಮಗನನ್ನು ಹೆತ್ತ ತಾಯಿಯೇ ಸೀಮೆಎಣ್ಣೆ ಸುರಿದು ಕೊಲೆ ಮಾಡಿದ ಘಟನೆ ಚಿಕ್ಕಬಾಣಾವಾರದಲ್ಲಿ ನಡೆದಿದೆ.

ಇದನ್ನೂ ಓದಿ: ಕೇರಳ ಮಾಜಿ ಸಿಎಂ ಉಮ್ಮನ್​ ಚಾಂಡಿ ನಿಧನ!

ಚಾಂದ್ ಪಾಷಾ(40)ಮೃತ ದುರ್ದೈವಿ, ಸೋಮವಾರ ಸಂಜೆ 4.30ರ ಸುಮಾರಿಗೆ ಘಟನೆ ನಡೆದಿದೆ.ಘಟನೇ ಸಂಬಂಧ ಸೋಫಿಯಾ (60) ಮೃತನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮೃತ ಚಾಂದ್​ ಪಾಷ, ಮದ್ಯ ವ್ಯಸನಿಯಾಗಿದ್ದ, ಕೆಲಸಕ್ಕೆ ಹೋಗದೇ ಕಾಲ ಕಳೆಯುತ್ತಿದ್ದ ಈತನ ನಡೆಗೆ ಬೇಸತ್ತ ಹೆಂಡತಿ ಮತ್ತು ಮಕ್ಕಳು ಕೆಲ ವರ್ಷಗಳ ಹಿಂದೆ ಮನೆ ತೊರೆದಿದ್ದರು,ಸದ್ಯ ಮನೆಯಲ್ಲಿ ಚಾಂದ್​ ಪಾಷ ಮತ್ತು ಆತನ ತಾಯಿ ಸೋಫಿಯ ಮಾತ್ರ ಇದ್ದರು, ಸೋಫಿಯಾ ಕೂಲಿ ಕೆಲಸ ಮಾಡಿಕೊಂಡು ಬಂದು ಜೀವನ ಮಾಡುತ್ತಿದ್ದಳು,  ನಿತ್ಯ ಕುಡಿದುಬಂದು ಮನೆಯಲ್ಲಿ ಜಗಳ ಮಾಡುತ್ತ ಹಿಂಸಿಸುತ್ತಿದ್ದ.

ಭಯ ಪಡಿಸುವ ಸಲುವಾಗಿ ಸೀಮೆಎಣ್ಣೆ ಎರಚಿ ಬೆಂಕಿಪೊಟ್ಟಣ ಕೈಯಲ್ಲಿ ಹಿಡಿದು ಬೆದರಿಸಲು ಮುಂದಾಗಿದ್ದರು, ಈ ವೇಳೆ ಬೆಂಕಿಕಡ್ಡಿ ಗೀರುತ್ತಲೇ ಆಚಾನಕ್ ಮಗನಿಗೆ ತಾಕಿ ಧಗ ಧಗ ಸುಟ್ಟುಹೋಗಿದ್ದಾನೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES