Saturday, August 23, 2025
Google search engine
HomeUncategorizedಕನ್ನಡ ಪಾಠ ನಿಲ್ಲಿಸಿದ್ದೇ ಆದಲ್ಲಿ ಬೃಹತ್ ಪ್ರತಿಭಟನೆ : ಕರವೇ ಪ್ರವೀಣ್ ಶೆಟ್ಟಿ

ಕನ್ನಡ ಪಾಠ ನಿಲ್ಲಿಸಿದ್ದೇ ಆದಲ್ಲಿ ಬೃಹತ್ ಪ್ರತಿಭಟನೆ : ಕರವೇ ಪ್ರವೀಣ್ ಶೆಟ್ಟಿ

ಬೆಂಗಳೂರು : ಯಾರಿಗೆ ಕನ್ನಡ ಬೇಡವೋ ಅಂಥವರು ಕರ್ನಾಟಕವನ್ನು ಬಿಟ್ಟು ಹೊರಗಡೆ ಹೋಗಿ, ಕನ್ನಡ ಬೆಡದ ಪೊಷಕರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಒತ್ತಾಯಿಸಿದರು.

ಇದನ್ನೂ ಓದಿ: ಪೌರಾಯುಕ್ತರ ನಿರ್ಲಕ್ಷ್ಯಕ್ಕೆ ಬೇಸತ್ತು ಪೊರಕೆ ಹಿಡಿದು ಸ್ವಚ್ಛತೆಗಿಳಿದ ಜಿಲ್ಲಾಧಿಕಾರಿ!

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರವ ಸೋಫಿಯಾ ಶಾಲೆಯಲ್ಲಿ ಕನ್ನಡ ಪಾಠಗಳನ್ನು ತೆಗೆದು ಹಾಕುವಂತೆ 50ಕ್ಕೂ ಹೆಚ್ಚು ಪೋಷಕರಿಂದ ಮನವಿ ಕೇಳಿಬಂದಿರುವುದು ದುರಾದೃಷ್ಟಕರ, ಸೋಫಿಯಾ ಶಾಲೆಯಲ್ಲಿ ಓದುತ್ತಿರುವುವವರು ಹೆಚ್ಚಾಗಿ ಗುಜರಾತಿಗಳು ಮತ್ತು ಮಾರ್ವಾಡಿಗಳ ಮಕ್ಕಳು, ಇವರೆಲ್ಲಾ ಕರ್ನಾಟಕವನ್ನು ಗುಜರಾತ್​ ಎಂದು ತಿಳಿದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಲೇಬೇಕು, ಕನ್ನಡ ಬೇಡ ಎನ್ನುವವರು ರಾಜ್ಯವನ್ನು ಬಿಟ್ಟು ಹೋಗಲಿ ಮತ್ತು ಇಂಥವರ ವಿರುದ್ದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕು,

ಸೋಫಿಯಾ ಶಾಲೆಯಲ್ಲಿ ಕನ್ನಡ ಪಾಠಗಳನ್ನು ತೆಗೆದದ್ದೇ ಆದಲ್ಲಿ ಬೃಹತ್​ ಮಟ್ಟದ ಹೋರಾಟವನ್ನು ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments