Sunday, November 3, 2024

ರೈತರ ಸಮಾಧಿ ಮೇಲೆ ಕಾಂಗ್ರೆಸ್ ಮಹಾಘಟಬಂಧನ್ : ಹೆಚ್.ಡಿ ಕುಮಾರಸ್ವಾಮಿ ಕಿಡಿ

ರಾಮನಗರ : ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ನಂತರದಲ್ಲಿ ಸುಮಾರು 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಚಿಂತನೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಕೃಷಿ ಇಲಾಖೆ ಸಂಪೂರ್ಣ ಕಡೆಗಣಿಸಿದ್ದಾರೆ. ರೈತರ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಿಲ್ಲ. ಹಾಗಾಗಿ, ಇದೊಂದು ದರಿದ್ರ ಸರ್ಕಾರ ಎಂದು ಕಿಡಿಕಾರಿದ್ದಾರೆ.

ರಾಜ್ಯ ಲೂಟಿ ಮಾಡ್ತಿದ್ದಾರೆ

ಕಾಂಗ್ರೆಸ್ ನಾಯಕರು ಹಿಂದಿನ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಟೀಕೆಗಳನ್ನು ಮಾಡುತ್ತಾರೆ. ಆದರೆ, ಪ್ರಾರಂಭಿಕವಾಗಿಯೇ ಈ ಸರ್ಕಾರದಕ್ಕೆ ಆರ್ಥಿಕ ಶಿಸ್ತು ಇಲ್ಲ. ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಲೂಟಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಸಭೆ ಆರಂಭ

ಕೃಷಿ ಇಲಾಖೆಯಲ್ಲಿ ನಿಮ್ಮ ಸಾಧನೆ ಏನು?

ರೈತರು ಸಾಯ್ತಿದ್ದಾರೆ. ನಿಮ್ಮ ನೆರವಿಗೆ ನಾವಿದ್ದೇವೆ, ನಿಮ್ಮ ಪರ ಕೆಲಸ ಮಾಡ್ತೀವಿ ಅಂತ ಹೇಳಿಲ್ಲ. ದೇಶದಲ್ಲಿ ಯಾವ ಸಂದೇಶ ಕೊಡ್ತೀರಿ. ಗ್ಯಾರಂಟಿ ಮಾಡಲ್ ಅಂತೆ. ಗ್ಯಾರಂಟಿ ಅನೌನ್ಸ್ ಮಾಡಿದ ಮೇಲೆಯೇ ರೈತ ಆತ್ಮ ಹತ್ಯೆ ಮಾಡಿಕೊಂಡಿರೋದು. ಕೃಷಿ ಇಲಾಖೆಯಲ್ಲಿ ನಿಮ್ಮ ಸಾಧನೆ ಏನು?ಲೂಟಿ ಮಾಡಿಬಿಟ್ರು ಅಂತ ಬಿಜೆಪಿಗೆ ಹೇಳಿದ್ರಿ. ನಿಮ್ಮ ಸಾಧನೆ ಏನು? ಈ ಸಂದೇಶ ಕೊಡ್ರಪ್ಪ ನಿಮ್ಮ ಮಹಾಘಟಬಂಧನ್ ನಲ್ಲಿ ಎಂದು ಗುಡುಗಿದ್ದಾರೆ.

ವಿಜೃಂಭಣೆಯಿಂದ ಕಟೌಟರ್ ಹಾಕಿದ್ದೀರಿ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಾರಂಭ ಆಗಿ ಇಲ್ಲಿಯವರೆಗೂ ಕಟೌಟರ್‌ಗಳು ರಾರಾಜಿಸ್ತಿವೆ. ಯಾರ ಸಮಾಧಿ ಮೇಲೆ ವಿಜೃಂಭಣೆಯಿಂದ ಕರೆದಿದ್ದೀರಿ. ಎರಡು ತಿಂಗಳಿಂದ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜೃಂಭಣೆಯಿಂದ ಕಟೌಟರ್ ಹಾಕಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES