Wednesday, January 22, 2025

ಮಹಾಘಟಬಂದನ್ ಸಭೆ ಯಾವ ಕಾರಣಕ್ಕೆ ಅನ್ನೋದು ಅವರಿಗೆ ಗೊತ್ತಿಲ್ಲ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಷ್ಟ್ರದ ಎಲ್ಲಾ ವಿಪಕ್ಷಗಳ ನಾಯಕರು ಇಂದು ನಗರದಲ್ಲಿ ನಡೆಯುತ್ತಿರುವ ಮಹಾಘಟಬಂಧನ್ ಸಭೆಗೆ ಆಗಮಿಸುತ್ತಿದ್ದಾರೆ. ಈ ಸಭೆ ಯಾವ ಕಾರಣಕ್ಕೆ ಅನ್ನೋದು ಅವರಿಗೇ ಗೊತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪಕ್ಷದ ಜೊತೆ ಧೃಡವಾಗಿದ್ದೇನೆ: ತೇಜಸ್ವಿನಿ ಅನಂತ್​ ಕುಮಾರ್​​ ಟ್ವೀಟ್​

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲನೆಯದಾಗಿ ಮೊಹಮದ್ ಮುಫ್ತಿ ಮತ್ತಿತರರು ಬಂದಿದ್ದಾರೆ. ಅವರ ನಿಲುವು ಪಾಕಿಸ್ತಾನಕ್ಕೆ ಸೇರಬೇಕು ಅನ್ನೋದು. ಮಮತಾ ಬ್ಯಾನರ್ಜಿಯವರ ನಿಲುವು ಬಾಂಗ್ಲಾ ಜೊತೆ ಸೇರೋದು. ಇವರೆಲ್ಲರೂ ಕುತಂತ್ರ ಮಾಡೋಕೆ ಬಂದಿದ್ದಾರೆ.

ಆದರೆ, ಇವರಲ್ಲಿ ಒಬ್ಬರಿಗೊಬ್ಬರು ವಿಶ್ವಾಸ ಇಟ್ಟುಕೊಂಡಿಲ್ಲ, ಮಳೆಗಾಲದಲ್ಲಿ ಅಣಬೆ ರೀತಿ ಬೆಳೆದಿದ್ದಾರೆ. ಸ್ವಲ್ಪ ದಿನ ಕಳೆದ ಬಳಿಕ ಅವರೇ ಚದುರಿಹೋಗ್ತಾರೆ ಎಂದರು.

ಇನ್ನು ರಾಹುಲ್ ಗಾಂಧಿ ವಿಚಾರ ಪ್ರಸ್ತಾಪಿಸಿದ ಅವರು, ರಾಹುಲ್​ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿಗೆ  ಎಲ್ಲರೂ ಆಗಮಿಸುತ್ತಿದ್ದಾರೆ. ಆದರೆ ರಾಹುಲ್​ ಗಾಂಧಿ ಅವರು ಸಂಸದರೂ ಕೂಡ ಅಲ್ಲ ಎಂದು ಲೇವಡಿ ಮಾಡಿದರು.

RELATED ARTICLES

Related Articles

TRENDING ARTICLES