Saturday, November 2, 2024

ಸಿದ್ದರಾಮಯ್ಯ ಅನುಭವಿ ಸಿಎಂ, ಆದ್ರೆ..! : ವಿಜಯೇಂದ್ರ ಏನಂದ್ರು ನೋಡಿ

ಬೆಂಗಳೂರು : ಸಿದ್ದರಾಮಯ್ಯ ಅನುಭವಿ ಸಿಎಂ, ಬಜೆಟ್ ನಲ್ಲಿ ಸಾಕಷ್ಟು ನಿರೀಕ್ಷೆ ಇತ್ತು ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಕುಟುಕಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸದನವನ್ನು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಳಸಿದ್ದಾರೆ ಎಂದು ಬೇಸರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು 140 ಕೋಟಿ ಜನರನ್ನು ಪ್ರತಿನಿಧಿಸುತ್ತಾರೆ. ಅವರನ್ನು ಗೌರವಿಸಬೇಕು. ಅದನ್ನೂ ಬಿಟ್ಟು ಕಾಂಗ್ರೆಸ್ ಸದ್ಸಯರು ಸದನದಲ್ಲಿ ಮೋದಿ ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಚಾಟಿ ಬೀಸಿದರು.

ಇದನ್ನೂ ಓದಿ : ಗಂಡಸರಿಗೂ ಗೃಹಲಕ್ಷ್ಮೀ ಕೊಡಬೇಕು : ವಾಟಾಳ್ ನಾಗರಾಜ್

ಕಳ್ಳ ಭಟ್ಟಿ ತಯಾರಿಸಲು ಅವಕಾಶ

ಕಾಂಗ್ರೆಸ್ ಐದು ಉಚಿತ ಗ್ಯಾರಂಟಿ ಜಾರಿಗೆ ಯಾವ ಮೂಲಗಳಿಂದ ಹಣ ಕ್ರೋಡೀಕರಣದ ಬಗ್ಗೆ ಹೇಳಿಲ್ಲ. ಅಬಕಾರಿ ತೆರಿಗೆ ಹೆಚ್ಚಳದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹಾಗಾದರೆ, ಇದರ ಪರಿಣಾಮ ಏನಾಗಬಹುದು? ಗ್ರಾಮೀಣ ಭಾಗದಲ್ಲಿ ಕಳ್ಳ ಭಟ್ಟಿ ತಯಾರಿಸಲು ಅವಕಾಶ ಆಗುತ್ತದೆ. ಇದರಿಂದ ಬಡವರ ಮೇಲೆ ಪರಿಣಾಮ ಬೀರಲಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಿಸಬೇಕು ಎಂದು ಸದನಸ ಗಮನ ಸೆಳೆದರು.

ಅನ್ನಭಾಗ್ಯ ಯೋಜನೆಗೆ ಸ್ವಾಗತ

ಬಿಜೆಪಿ ಶಾಸಕ ಗುರುರಾಜ್ ಗಂಟಿಹೋಳಿ ಅವರು ಅನ್ನಭಾಗ್ಯ ಯೋಜನೆ ಸ್ವಾಗತ ಮಾಡಿದರು. ಯೋಚನೆ ಮತ್ತು ಯೋಜನೆ ರೂಪಿಸಿದವರಿಗೆ ಅಭಿನಂದನೆ. ಬಡವರ ಹೊಟ್ಟೆ ತುಂಬಿಸುವ ಯೋಜನೆ. ಯಾವುದೇ ಸರ್ಕಾರ ಈ ಯೋಜನೆ ಜಾರಿ ಮಾಡಿರಲಿ. ನಾನು ಸ್ವಾಗತ‌ ಮಾಡುತ್ತೇನೆ ಎಂದು ಗುರುರಾಜ್ ಗಂಟಿಹೋಳಿ ಹೇಳಿದರು.

RELATED ARTICLES

Related Articles

TRENDING ARTICLES