Monday, December 23, 2024

ವಿದ್ಯಾರ್ಥಿ ಬಸ್​ ಪಾಸ್​ ಮಾನ್ಯತೆ ವಿಸ್ತರಣೆ!

ಬೆಂಗಳೂರು : ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಿಎಂಟಿಸಿ ಯೂ ಸಿಹಿಸುದ್ದಿ ನೀಡಿದ್ದು, ಬಸ್ ಪಾಸ್ ಮಾನ್ಯತೆ ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಾವನನ್ನೇ ಕೊಂದ ಅಳಿಯ

2022-23ನೇ ಸಾಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದ ವಿದ್ಯಾರ್ಥಿ ಬಸ್ ಪಾಸ್‌ಗಳ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಿದ ಬಿಎಂಟಿಸಿ ಆದೇಶ ಹೊರಡಿಸಿದೆ. ಕಳೆದ ವರ್ಷದ ಹಳೆಯ ಬಸ್​ ಪಾಸ್ ಅಥವಾ ಕಾಲೇಜು ಶುಲ್ಕ ರಸೀದಿ ತೋರಿಸಿ ವಿದ್ಯಾರ್ಥಿಗಳು ಉಚಿತ ಪ್ರಯಾಣ ಮಾಡಬಹುದಾಗಿದೆ.

1 ರಿಂದ 12 ನೇ ತರಗತಿ ವಿದ್ಯಾರ್ಥಿಗಳು, ಸ್ನಾತಕೋತ್ತರ ಸಂಜೆ ಕಾಲೇಜು ವಿದ್ಯಾರ್ಥಿಗಳು, ಪಿ ಹೆಚ್ ಡಿ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದಾಗಿದೆ.

ಇನ್ನೂ 2023-24 ಸೇ ಸಾಲಿನ ವಿದ್ಯಾರ್ಥಿಗಳಿಗೆ ಹೊಸ ಪಾಸ್ ಗಳನ್ನು ಜುಲೈ 7 ರಿಂದ ಆರಂಭಿಸಿದ್ದು ಆನ್​ ಲೈನ್​ ಮತ್ತು ಆಫ್​ ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

RELATED ARTICLES

Related Articles

TRENDING ARTICLES