Monday, December 23, 2024

ಫ್ರೀ ಪ್ರಯಾಣಕ್ಕೆ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್

ಬೆಂಗಳೂರು : ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣದ ಅವಕಾಶ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ಗುರುತಿನ ಚೀಟಿ ತೋರಿಸುವ ಹಾಗೂ ಟಿಕೆಟ್ ನೀಡುವ ಕಿರಿಕಿರಿ ತಪ್ಪಿಸಲು ಮಹಿಳಾ ಪ್ರಯಾಣಿಕರಿಗೆ ಮೆಟ್ರೋ ಮಾದರಿಯ ಸ್ಮಾರ್ಟ್ ಕಾರ್ಡ್ ನೀಡುವ ಚಿಂತನೆ ಮಾಡಿದೆ.

ಇನ್ನುಮುಂದೆ ಮಹಿಳೆಯರು ಬಸ್​ಗಳಲ್ಲಿ ಗುರುತಿನ ಚೀಟಿ ತೋರಿಸು ಅಗತ್ಯವಿಲ್ಲ. ಉಚಿತ ಪ್ರಯಾಣಕ್ಕೆ ಮಹಿಳಾ ಪ್ರಯಾಣಿಕರಿಗೆ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್‌ ನೀಡಲಾಗುವುದು. ಟಿಕೆಟ್‌ ನೀಡುವ ಕಿರಿಕಿರಿ ತಪ್ಪಿಸಲು ಮಾಮೂಲಿ ಸ್ಮಾರ್ಟ್‌ಕಾರ್ಡ್‌ ಬದಲು, ಟ್ಯಾಪ್‌ ಆಯಂಡ್‌ ಟ್ರಾವೆಲ್‌ ತಂತ್ರಜ್ಞಾನದ ಸ್ಮಾರ್ಟ್‌ಕಾರ್ಡ್‌ ನೀಡುವ ಕುರಿತು ಸಾರಿಗೆ ಇಲಾಖೆ ಚಿಂತನೆ ಮಾಡಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಫ್ರೀ ಬಸ್ ಪ್ರಯಾಣಕ್ಕೆ ‘ಹೆಣ್ಣಿನ ಅವತಾರ’ ತಾಳಿದ ಭೂಪ!

ಆರ್ಥಿಕ ಪರಿಸ್ಥಿತಿ ಆಧರಿಸಿ ಜಾರಿ

ಮಹಿಳೆಯರು ಬಸ್‌ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಟ್ಯಾಪ್‌ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್‌ ಮಾಡಬೇಕಿದೆ. ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಈ ಯೋಜನೆ ದುಬಾರಿಯಾಗಲಿದೆ. ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಲಾಗುವುದು. ಮೆಟ್ರೋ ಮಾದರಿಯ ಕಾರ್ಡ್​ಗಳನ್ನು ನೀಡುವ ಚಿಂತನೆಯಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES