Sunday, December 29, 2024

3ನೇ ಬಾರಿ ಮೋದಿ ಪ್ರಧಾನಿ ಆಗೋದನ್ನು ತಡೆಯಲು ಸಾಧ್ಯವಿಲ್ಲ : ಬಿ.ವೈ ವಿಜಯೇಂದ್ರ

ಬೆಂಗಳೂರು : ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗೋದನ್ನು ತಡೆಯಲು ಸಾಧ್ಯವಿಲ್ಲ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಬೆಂಗಳೂರು ಮಹಾನಗರದಲ್ಲಿ ದೇಶದ ಎಲ್ಲಾ ವಿಪಕ್ಷಗಳು ಒಗ್ಗೂಡಿ ಸಭೆ ಮಾಡ್ತಿವೆ. ದೇಶದ ವಿಪಕ್ಷಗಳ ಕಥೆ ಹೇಗಾಗಿದೆ ಅಂದ್ರೆ.. ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು ಅಂತ. ಅಂತ ಪರಿಸ್ಥಿತಿ ವಿಪಕ್ಷಗಳಿಗೆ ಆಗಿದೆ. ಮೋದಿಜಿ ನಾಯಕತ್ವ ಜಗತ್ತು ಕೊಂಡಾಡುವಾಗ, 20ಕ್ಕೂ ಹೆಚ್ಚು ರಾಷ್ಟ್ರಗಳು ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಿದೆ ಎಂದು ಹೇಳಿದರು.

ಮತ್ತೆ ಮೋದಿ ಪ್ರಧಾನಿ ಆಗಬಾರದು

ದೇಶದ ವಿಪಕ್ಷಗಳಿಗೆ ದೇಶ ಕಟ್ಟುವ ಚಿಂತನೆ ಇಲ್ಲ. ಹೇಗಾದ್ರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು. ಮತ್ತೆ ಮೋದಿ ಪ್ರಧಾನಿ ಆಗಬಾರದು ಅನ್ನೋ ಒನ್ ಲೈನ್ ಅಜೆಂಡಾ ಇವರದ್ದು. ಅವರಿಗೆ ಶುಭವಾಗಲಿ, ನಿವೇನೇ ಮಾಡಿದ್ರು ಜನ ಇದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬಿಜೆಪಿ ಪಕ್ಷದ ಜೊತೆ ಧೃಡವಾಗಿದ್ದೇನೆ: ತೇಜಸ್ವಿನಿ ಅನಂತ್​ ಕುಮಾರ್​​​

ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ

ಜೆಡಿಎಸ್ ಜೊತೆ ಮೈತ್ರಿ ವಿಚಾರ ಕುರಿತು ಮಾತನಾಡಿದ ಅವರು, ನನಗೂ ಆ ವಿಚಾರ ಗೊತ್ತಿಲ್ಲ. ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ‌. ನಾನು ಮೊದಲ ಬಾರಿ ಶಾಸಕನಾಗಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಮಾಜಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ವಿಚಾರವಾಗಿ ಮಾತನಾಡಿ, ರಜ್ಯಾಧ್ಯಕ್ಷ ಸ್ಥಾನ ಕೊಡಲಿ, ನನ್ನ ಬೆಂಬಲವೂ ಇದೆ ಎಂದು ಬಿ.ವೈ ವಿಜಯೇಂದ್ರ ಸೋಮಣ್ಣ ಪರ ಬ್ಯಾಟ್ ಬೀಸಿದರು.

RELATED ARTICLES

Related Articles

TRENDING ARTICLES