Monday, December 23, 2024

ಮಹಾಘಟಬಂಧನ್ ಸಭೆ: ವಾಹನ ಸಂಚಾರದಲ್ಲಿ ಬದಲಾವಣೆ

ಬೆಂಗಳೂರು: ಜುಲೈ 17 ಮತ್ತು 18 ರಂದು ದೇಶದ ಪ್ರಮುಖ ರಾಜಕೀಯ ಪಕ್ಷಗಳು ಮಹಾಘಟಬಂಧನ್ ಸಭೆಯಲ್ಲಿ ಭಾಗಿಯಾಗಲು ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ವಾಹನ ಸವಾರರರಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

ಇದನ್ನೂ ಓದಿ: ಇಂದಿನಿಂದ ಎರಡು ದಿನ ಮೋದಿ ವಿರುದ್ದದ ರಾಜಕೀಯ ಶಕ್ತಿ ಪ್ರದರ್ಶನ ಸಭೆ

ನಗರದ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿರುವ ಲೋಕಸಭೆಯ ವಿರೋಧ ಪಕ್ಷಗಳ ಹಲವು ನಾಯಕರು, ಗಣ್ಯ ವ್ಯಕ್ತಿಗಳ ಸಂಚಾರ ಇರುವ ಹಿನ್ನಲೆಯಲ್ಲಿ ರಸ್ತೆ ಬದಲಾವಣೆಗೆ ಸೂಚನೆ ನೀಡಿದ್ದು

ಈ ಕೆಳಕಂಡ ರಸ್ತೆಗಳ ಬದಲಿಗೆ ಬೇರೆ ಮಾರ್ಗಗಳನ್ನು ವಾಹನಸವಾರರು ಬಳಸಲು ಸೂಚನೆ ನೀಡಲಾಗದೆ.

ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ಬಳ್ಳಾರಿ ರಸ್ತೆ,  ಈ ರಸ್ತೆಗಳನ್ನು ಬಳಸದೇ ಪರ್ಯಾಯ ಮಾರ್ಗ ಅನುಸರುಸಲು ಸೂಚನೆ ನೀಡಲಾಗಿದೆ.  ಜೊತೆಗೆ, ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ, ಬಳ್ಳಾರಿ ರಸ್ತೆ, ರೇಸ್‌ ಕೋರ್ಸ್ ರಸ್ತೆ ಗಳಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.

RELATED ARTICLES

Related Articles

TRENDING ARTICLES