ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಸಿಗ್ತಿಲ್ಲ ಮುಕ್ತಿ!: ಗೊಂದಲಗಳಿಗೆ ಪರಿಹಾರ ಇಲ್ಲಿದೆ
ಜುಲೈ 16, ಭಾನುವಾರ KLE ಮತ್ತು ಶೇಷಾದ್ರಿ ಕಾಲೇಜಿನಲ್ಲಿ (ಕೆಂಗೇರಿ ) ನಡೆದ ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಕುಲಪತಿಗಳಿಗೆ ದೂರು ನೀಡಿದ್ದಾರೆ.
ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಇಂದು ಬೆಂಗಳೂರು ವಿವಿಯ ಲೈಬ್ರರಿ ಮುಂದೆ ಪ್ರತಿಭಟನೆಗೆ ನಿರ್ಧಾರಿಸಿದ್ದಾರೆ.
ವಿದ್ಯಾರ್ಥಿಗಳ ಆರೋಪವೇನು..?
- ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ಇರಲಿಲ್ಲ.
2.15 ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ವಿತರಣೆ.
- ಪ್ರಶ್ನೆ ಪತ್ರಿಕೆಯಲ್ಲಿ ಸೀಲ್ ಆಗಿರಲಿಲ್ಲ.
- ಕೆಲವರು ಮೊಬೈಲ್ ತಂದು ಬರೆದಿದ್ದಾರೆ.
- ಮತ್ತೆ ಚರ್ಚೆ ಮಾಡಿ ಬರೆದಿದ್ದಾರೆ.
- ಪ್ರಶ್ನೆ ಪತ್ರಿಕೆಯ ಬಂಡಲ್ ಮೊದಲೇ ಓಪನ್ ಮಾಡಿ ಕೊಠಡಿಗೆ ತಂದಿದ್ದಾರೆ.
- ವಿಶ್ವವಿದ್ಯಾಲಯವು ಅಭ್ಯರ್ಥಿಗಳಿಗೆ ಕಾರ್ಬನ್ ಪ್ರತಿ ನೀಡಿಲ್ಲ.
- KLE ಮತ್ತು SHESADRI (ಕೆಂಗೇರಿ ) ಕಾಲೇಜುನಲ್ಲಿ 11:30 ವರೆಗೂ ಪ್ರವೇಶ ನೀಡಿದ್ದಾರೆ.
- ವಿಶ್ವವಿದ್ಯಾನಿಲಯವು Phd ಪ್ರೆವೇಶ ಪರೀಕ್ಷೆಯ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಆತುರಾತುರವಾಗಿ OMR ಪ್ರತಿಯನ್ನು ಅಪ್ಲೋಡ್ ಮಾಡಿದ್ದಾರೆ ಎನ್ನುವ ಪ್ರಮುಖ ಆರೋಪಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.