Wednesday, January 22, 2025

ಬಿಜೆಪಿ ಪಕ್ಷದ ಜೊತೆ ಧೃಡವಾಗಿದ್ದೇನೆ: ತೇಜಸ್ವಿನಿ ಅನಂತ್​ ಕುಮಾರ್​​ ಟ್ವೀಟ್​

ಬೆಂಗಳೂರು: ನಾನು  ಬಿಜೆಪಿ ಪಕ್ಷ ಬಿಡಲ್ಲ , ಪಕ್ಷದ ಜೊತೆಗೆ ದೃಢವಾಗಿ ಇದ್ದೇನೆ ಎಂದು ತೇಜಸ್ವಿನಿ ಅನಂತಕುಮಾರ್ ಟ್ವೀಟ್​ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂಓದಿ: ಜೆಡಿಎಸ್​ ಪಕ್ಷವನ್ನು ಅವರು ಲೆಕ್ಕಕ್ಕೇ ಇಟ್ಟಿಲ್ಲ : ಕುಮಾರಸ್ವಾಮಿ ಕಿಡಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇತ್ತೀಚೆಗೆ ಕೆಲ ಮಾಧ್ಯಮಗಳು ಕೇಂದ್ರ ಸಚಿವರಾಗಿದ್ದ ಅನಂತಕುಮಾರ್​ ಅವರ ಪತ್ನಿ ತೇಜಸ್ವಿನಿ  ಅನಂತ್​ ಕುಮಾರ್​ ಬಿಜೆಪಿ ತೊರೆದು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ  ಎನ್ನುವ ವರದಿ ಮಾಡಿದ್ದವು. ಇವೆಲ್ಲವುದಕ್ಕೂ ಇಂದು ಟ್ವೀಟ್​ ಮೂಲಕ ಸ್ಪಷ್ಟನೇ ನೀಡಿದ್ದಾರೆ.

ಈ ವರಿದಿ ಬೆನ್ನಲ್ಲೇ ಟ್ವಿಟ್ ಮಾಡಿದ ತೇಜಸ್ವಿನಿ ಅನಂತ ಕುಮಾರ್​, ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ.ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES