Monday, December 23, 2024

ಜೆಡಿಎಸ್​ ಪಕ್ಷವನ್ನು ಅವರು ಲೆಕ್ಕಕ್ಕೇ ಇಟ್ಟಿಲ್ಲ : ಕುಮಾರಸ್ವಾಮಿ ಕಿಡಿ

ಬೆಂಗಳೂರು: ನಗರದ ತಾಜ್​ ವೆಸ್ಟ್​ನಲ್ಲಿ ನಡೆಯುತ್ತಿರುವ ಮಹಾಘಟಬಂದನ್ ಸಭೆಯ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಇದನ್ನೂಓದಿ: ಇಂದಿನಿಂದ ದಕ್ಷಿಣಾಯನ ಮಹಾ ಪರ್ವಕಾಲ ಆರಂಭ

ತಮ್ಮ ನಿವಾಸದ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜೆಡಿಎಸ್​ ಪಕ್ಷವನ್ನು ಲೆಕ್ಕಕ್ಕೆ ಇಟ್ಟಿಲ್ಲ ಅವರು, ಮಹಾಘಟಬಂದನ್ ವ್ಯವಸ್ಥಾಪಕರು ಜೆಡಿಎಸ್ ಮುಳುಗಿಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ, ನಮಗೆ ಆಹ್ವಾನ ಕೊಡ್ತಾರೋ, ಇಲ್ಲವೋ  ಅನ್ನೊ ವಿಚಾರಕ್ಕೆ ನಾವು ತಲೆ ಕೂಡ ಕೆಡಿಸಿಕೊಂಡಿಲ್ಲ,

ನನ್ನ ಕೆಲಸ ಏಮಿದ್ದರು ಪಕ್ಷ ಸಂಘಟನೆ ಮಾಡೋದು, ನಾಡಿನ ಸಮಸ್ಯೆ ಏನಿದೆ ಅದರ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೇನೆ, ರಾಜ್ಯದಲ್ಲಿ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರಸ್ತೆಯುದ್ದಕ್ಕೂ ಯಾರು ಮಾಡದ ಸಾಧನೆ ಮಾಡಿದ್ದೇವೆ ಅಂತ ಜೋರಾಗಿ ಬ್ಯಾನರ್ ಹಾಕಿದ್ದಾರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೂತಿದ್ದಾರೆ ಇವರಿಗೆಲ್ಲಾ ರೈತರ ಸಾವು ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಎನ್ ಡಿ ಎ ಸಭೆಯಲ್ಲಿ ಭಾಗಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸದ್ಯಕ್ಕೆ ನಮಗೆ ಎಲ್ಲೂ ಕೂಡ ಆಹ್ವಾನ ಇಲ್ಲ, ಇನ್ನೂ ದಿನಗಳಿವೆ  ನೋಡೊಣ ಎಂದರು.

RELATED ARTICLES

Related Articles

TRENDING ARTICLES