Monday, December 23, 2024

ಗಂಡಸರಿಗೂ ಗೃಹಲಕ್ಷ್ಮೀ ಕೊಡಬೇಕು : ವಾಟಾಳ್ ನಾಗರಾಜ್

ಬೆಂಗಳೂರು : ಮಹಿಳೆಯರಂತೆಯೇ ಗಂಡಸರಿಗೂ ಗೃಹಲಕ್ಷ್ಮೀ ಕೊಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯ ಮಾಡಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡ-ಹೆಂಡತಿ, ಯಜಮಾನ-ಯಜಮಾನಿಗೆ ಜಗಳ ತಂದಿಡೋದು ಸರಿಯಲ್ಲ ಎಂದು ಗುಡುಗಿದರು.

ಗೌರವಯುತವಾಗಿ ಕೇಳ್ತೀನಿ, ಯಜಮಾನನಿಗೂ ಕೊಡಬೇಕು. ಅವರನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಯಜಮಾನಿಗೆ 2 ಸಾವಿರ ರೂಪಾಯಿ ಬಂದರೆ ಯಜಮಾನನ‌ ಕಥೆ ಏನು? ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ ಯಜಮಾನ, ಯಜಮಾನಿ ಇಬ್ಬರಿಗೂ ಎರಡೆರಡು ಸಾವಿರ ಘೋಷಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಫ್ರೀ ಪ್ರಯಾಣಕ್ಕೆ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್

ಕಾಂಗ್ರೆಸ್​ ಸರ್ಕಾರ ಬಸ್‌ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕೊಟ್ಟಿದೆ. ಇದನ್ನು ನೋಡಿದರೆ ಪುರುಷರ ಮೇಲೆ ಏನೋ ದ್ವೇಷ ಇದ್ದಂತಿದೆ. ಶಾಸನ ಸಭೆಯಲ್ಲಿ ಅನೇಕರು ಪುರುಷರಿದ್ದಾರೆ. ಆದರೂ ಈ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಪದವೀಧರ ನಿರುದ್ಯೋಗಿ ಯುವಕರಿಗೆ ಯುವನಿಧಿ ಕೊಡ್ತೀರಿ. ಆದರೆ, ಹಳ್ಳಿಯಲ್ಲಿ ಎಮ್ಮೆ ಕಾಯೋ, ಕುರಿ-ದನ ಕಾಯೋ ಹುಡುಗರ ಕಥೆ ಏನಾಗಬೇಕು? ಕುರಿ, ದನ, ಎಮ್ಮೆ ಕಾಯೋ ಯುವಕರಿಗೆ ಕನಿಷ್ಟ ಒಂದು ಸಾವಿರ ರೂಪಾಯಿ ಆದರೂ ಕೊಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

RELATED ARTICLES

Related Articles

TRENDING ARTICLES