Wednesday, October 2, 2024

ಬೆಂಗಳೂರಿನಲ್ಲಿ ‘ವಿಶ್ವ ಕುಂದಾಪುರ’ ಕನ್ನಡ ಹಬ್ಬದ ಸಂಭ್ರಮ

ಬೆಂಗಳೂರು : ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಟೀಮ್ ಕುಂದಾಪುರಿಯನ್ಸ್ ವತಿಯಿಂದ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಚರಿಸಲಾಯಿತು.

ಬೆಂಗಳೂರಿನಲ್ಲಿ ವಾಸಿಸುವ ಕುಂದಾಪುರ ಭಾಗದವರು ರಚಿಸಿಕೊಂಡಿರುವ ಟೀಮ್ ಕುಂದಾಪುರಿಯನ್ಸ್ ತಂಡದ ಮೂಲಕ‌ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇಂದು ನಡೆದ ‘ಮಾತಿನ್ ಹಬ್ಬ’ ಕಾರ್ಯಕ್ರಮದಲ್ಲಿ ಕುಂದಾಪುರಿಗರು ಎದುರಿಸುತ್ತಿರೋ ಸಮಸ್ಯೆ ಹಾಗೂ ಕನಸ್ಸಿನ ಕುಂದಾಪುರದ  ಬಗ್ಗೆ ಹಲವು ನಿರ್ಣಯ ಕೈಗೊಳ್ಳಲಾಯಿತು. ಈಗಾಗಲೇ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಬೆಂಗಳೂರಿನಲ್ಲಿ ಮನೆಮಾತಾದ ಟೀಮ್ ಕುಂದಾಪುರಿಯನ್ಸ್ ತಂಡ, ಕುಂದಾಪುರದ ಹಬ್ಬದ ಮೂಲಕ ತಮ್ಮ ಭಾಷಾ ಪ್ರೇಮ ಮತ್ತು ಬದ್ದತೆಯನ್ನು ಮೆರೆದಿದೆ.

ಗ್ರಾಮೀಣ ಸೊಗಡಿನ ಅಟ

ಮಾತಿನ ಹಬ್ಬ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಕನ್ನಡ ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ದೀಪಕ್ ಶೆಟ್ಟಿ ಬಾರ್ಕೂರು, ನಟ ಕವೀಶ್ ಶೆಟ್ಟಿ, ಸಮಾಜಸೇವಕ ಗೋವಿಂದ್ ಪೂಜಾರಿ, ಅಜಿತ್ ಶೆಟ್ಟಿ ಉಳ್ತೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದ ಲಗೋರಿ ಆಟ

ಕಾರ್ಯಕ್ರಮದಲ್ಲಿ ಕುಂದಾಪುರ ಕ್ವಿಜ್, ಕಠಿಣ ಪದಗಳ ಅರ್ಥ ಹೇಳುವ ಸ್ಪರ್ಧೆ ನಡೆಯಿತು. ಕುಂದಾಪುರದ ಗ್ರಾಮೀಣ ಆಟಗಳನ್ನು ಆಡಿಸಿ ಬಾಲ್ಯವನ್ನು ಮೆಲಕು ಹಾಕಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಗ್ರಾಮೀಣ ಭಾಗದ ಲಗೋರಿ ಆಟವನ್ನು ಆಡಿಸಿದ್ದು ನೆರೆದಿದ್ದ ಕುಂದಾಪುರಿಗರಿಗೆ ತಮ್ಮ ಹುಟ್ಟೂರನ್ನು ನೆನಪಿಸಿತು.

ಶಾಸಕ ಗುರುರಾಜ್ ಶ್ಲಾಘನೆ

ಬೈಂದೂರು ಶಾಸಕ ಗುರುರಾಜ್ ‌ಗಂಟಿಹೊಳೆ ಮಾತನಾಡಿ, ಕುಂದಾಪುರವು ಒಂದು  ಕಡೆ ಸಮುದ್ರ, ಪಶ್ಚಿಮ ‌ಘಟ್ಟ ಸಮೃದ್ದ ‌ಸಂಸ್ಕ್ರತಿ‌ ಹೊಂದಿದ ವೈಶಿಷ್ಟ್ಯ ಪ್ರದೇಶ. ದೇಶದ ನಾನಾ ಭಾಗಗಳಲ್ಲಿ ಬದುಕು ಕಟ್ಟಿಕೊಂಡರೂ ನಮ್ಮವರು ಭಾಷೆಯನ್ನ ಪ್ರೀತಿಸೋದನ್ನು ನೋಡೋದೇ ಚೆಂದ. ಬೆಂಗಳೂರಿನಲ್ಲಿ ನಮ್ಮ ಟೀಮ್ ಕುಂದಾಪುರಿಯನ್ಸ್ ಮಾತಿನ ಹಬ್ಬ ಕಾರ್ಯಕ್ರಮದ ಮೂಲಕ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಚರಣೆ ಮಾಡುತ್ತಿರೋದು ‌ಶ್ಲಾಘನೀಯ ಎಂದರು.

ಇನ್ನೂ, ಇದೇ ತಿಂಗಳ 23ಕ್ಕೆ ಬೆಂಗಳೂರಿನ ಬಂಟರ ಸಂಘದಲ್ಲಿ ಕುಂದಾಪುರ ಕನ್ನಡ ಪ್ರತಿಷ್ಠಾನ ವತಿಯಿಂದ ನಡೆಯಲಿರುವ ಅದ್ದೂರಿ ವಿಶ್ವ ಕುಂದಾಪುರ ಕನ್ನಡ ಹಬ್ಬ ಆಯೋಜಿಸಲಾಗಿದೆ.

RELATED ARTICLES

Related Articles

TRENDING ARTICLES