Wednesday, October 30, 2024

ಮಹಿಳೆಗೆ ನಂಬರ್​ ಕೊಟ್ಟು ಕರೆ ಮಾಡುವಂತೆ ಟಾರ್ಚರ್​: ಅಟ್ಟಾಡಿಸಿ ಹೊಡೆದ ಗಂಡ!

ಚಿಕ್ಕಮಗಳೂರು: ಮಹಿಳೆಗೆ ನಂಬರ್ ಕೊಟ್ಟು ಕಾಲ್ ಮಾಡುವಂತೆ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದ ಘಟನೆ ತಾಲ್ಲೂಕಿನ ಜಯಪುರದ ಬಳಿ ನಡೆದಿದೆ.

ಇದನ್ನೂ ಓದಿ: ಶಿಥಿಲಾವಸ್ಥೆ ತಲುಪಿದ ತಾಲ್ಲೂಕು ಕಚೇರಿ ಕಟ್ಟಡ: ಕಡತಗಳ ರಕ್ಷಣೆಗೆ ಟಾರ್ಪಲ್​ ಮೊರೆ!

ಬಶೀರ್ ಹಲ್ಲೆಗೊಳಗಾದ ವ್ಯಕ್ತಿ, ಜಯಪುರದಲ್ಲಿ ಡಿಶ್ ರಿಪೇರಿ ಕೆಲಸ ಮಾಡುತ್ತಿದ್ದ ಈತ, ಮಹಿಳೆಯರಿಗೆ ತನ್ನ ಮೊಬೈಲ್​ ನಂಬರ್​ ನೀಡಿ ಕರೆ ಮಾಡುವಂತೆ ಪೀಡಿಸುವುದೇ ಕಸುಬು ಮಾಡಿಕೊಂಡಿದ್ದ.

ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಕಟ್ಟೆಮನೆ ಗ್ರಾಮದ ನಿವಾಸಿ ರಮೇಶ್​ ಎಂಬುವವರ ಪತ್ನಿಗೆ ಬಶೀರ್​ ತನ್ನ ಮೊಬೈಲ್ ನಂಬರ್​ ನೀಡಿ ಕರೆ ಮಾಡುವಂತೆ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಪತಿ ರಮೇಶ್​, ನಂಬರ್ ನೀಡಿದ ಬಶೀರ್ ನ್ನು ಹಿಡಿದು ನಡುರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾನೆ ಎನ್ನಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು, ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES