Sunday, December 22, 2024

ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದ ತಂದೆ

ಧಾರವಾಡ : ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಆಕೆಯ ತಂದೆಯೇ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಶಶಾಂಕ ಮೂಗನ್ನವರ ಗಾಯಗೊಂಡ ಯುವಕ. ಧಾರವಾಡದ ಉಪನಗರ ಠಾಣೆ ವ್ಯಾಪ್ತಿಯ ಸೈದಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಹುಲಗಪ್ಪ ಬಡಿಗೇರ ಎಂಬಾತ ಈ ಕೃತ್ಯ ಎಸೆಗಿದ್ದಾನೆ. ಹುಲಗಪ್ಪನ ಮಗಳನ್ನು ಶಶಾಂಕ ಪ್ರೀತಿಸುತ್ತಿದ್ದನು. ಈ ಹಿನ್ನೆಲೆ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಯುವಕನ ಸ್ಥಿತಿ ಗಂಭೀರವಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಯುವತಿ ವಿಚಾರಕ್ಕೆ ಸ್ನೇಹಿತರ ಜಗಳ

ಬೆಂಗಳೂರಲ್ಲಿ ಇತ್ತೀಚೆಗೆ ಕ್ರೈಂಗಳ ಸಂಖ್ಯೆ ಹೆಚ್ಚಾಗ್ತಿದೆ. ಯುವತಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ ಆರಂಭವಾಗಿ, ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಕಂಟೋನ್ಮೆಂಟ್ ಬಳಿಯ ತಿಮ್ಮಯ್ಯ ಸರ್ಕಲ್​​ನಲ್ಲಿ ಈ ಘಟನೆ ನಡೆದಿದೆ.

ಯುವತಿ ವಿಚಾರಕ್ಕೆ ಗಫರ್, ಹುಸೇನ್ ಮಧ್ಯೆ ಜಗಳ ಆರಂಭವಾಗಿದೆ. ಕುಡಿದ ಅಮಲಿನಲ್ಲಿ ಗಫರ್ ತಲೆಗೆ ಹುಸೇನ್ ಮತ್ತು ಆತನ ಸ್ನೇಹಿತ ಬಿಯರ್ ಬಾಟಲ್ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದ ಗಫರ್​​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಮಾಡಿದ ಹುಸೇನ್ ಹಾಗೂ ಮತ್ತೊಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಯುವಕ ಗಫರ್ ಪಾರಾಗಿದ್ದಾನೆ.

RELATED ARTICLES

Related Articles

TRENDING ARTICLES