Sunday, December 22, 2024

ರಾತ್ರೋ ರಾತ್ರಿ ಗೇಟ್​ ಹಾರುತ್ತಿರುವ ಹಾಸ್ಟೆಲ್​ ವಿದ್ಯಾರ್ಥಿನಿಯರು!

ತುಮಕೂರು: ರಾತ್ರೋ ರಾತ್ರಿ ವಿದ್ಯಾರ್ಥಿನಿಯರು ಸರ್ಕಾರಿ ಬಾಲಕೀಯರ ಹಾಸ್ಟೆಲ್​ ಗೇಟ್​ ಹಾರಿ ತಮ್ಮ ಬಾಯ್​ ಫ್ರೆಂಡ್​ ಗಳೊಂದಿಗೆ ಹೋಗಿ ಬರುತ್ತಿದ್ದಾರೆ ಎನ್ನುವ ಆರೋಪ ಕೊರಟಗೆರೆಯಲ್ಲಿ ಕೇಳಿಬಂದಿದೆ.

ಗೃಹ ಸಚಿವ ಡಾ.ಜಿ ಪರಮೇಶ್ವರ್ ರ ವಿಧಾನಸಭಾ ಕ್ಷೇತ್ರವಾದ ಕೊರಟಗೆರೆಯ ಸರ್ಕಾರಿ ಮೆಟ್ರಿಕ್​ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ಕೇಳೋರು ಇಲ್ಲ, ಕಾಯೋರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಪ್ರಥಮ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥನಿಯರು ಗೇಟ್​ ಹಾರಿ ಗಂಟೆಗಳ ಬಳಿಕ ಮತ್ತೆ ವಾಪಾಸ್​ ಹಾಸ್ಟೆಲ್​ ಬಂದು ಸೇರಿಕೊಳ್ಳುತ್ತಿದ್ದಾರೆ. ಬಾಲಕಿಯರು ನಡುರಾತ್ರಿ ಹೊರ ಹೋದರು ಬಂದರೂ ಹೇಳೋರೂ ಇಲ್ಲದೇ, ಕೇಳೋರೂ ಇಲ್ಲದೆ ಭದ್ರತಾ ಲೋಪ ಎದ್ದುಕಾಣುತ್ತಿದೆ.

ಇಷ್ಟೆಲ್ಲಾ ಕರ್ಮಕಾಂಡಗಳು ನಡೆಯುತ್ತಿದ್ದರು ಹಾಸ್ಟೆಲ್​ ವಾರ್ಡನ್​, ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ತಲೆಕೆಡಿಸಿಕೊಳ್ಳದೇ ಇರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸದ್ಯ ವಿದ್ಯಾರ್ಥಿನಿಯೂ ಗೇಟ್ ಹಾರೋ ವಿಡಿಯೋ ಪವರ್ ಟಿವಿಗೆ ಲಭ್ಯ.

RELATED ARTICLES

Related Articles

TRENDING ARTICLES