ರಾಮನಗರ: ಜಿಲ್ಲೆಯ ಮಾಗಡಿ ತಾಲ್ಲೂಕು ಕಚೇರಿ ಶಿಥಿಲಾವಸ್ಥೆ ಸ್ಥಿತಿ ತಲುಪಿದ್ದು ಮಳೆಗೆ ಮೇಲ್ಚಾವಣಿ ಸೋರಿ ಸರ್ಕಾರಿ ಕಡತಗಳು ಹಾಳಾಗುತ್ತಿದೆ. ಜೀವಭಯದಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸುವ ದುಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಮೊಬೈಲ್ ಕಳ್ಳತನಕ್ಕೆ ಬಂದಿದ್ದ ಕಳ್ಳ ಲಾಕ್!
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತವರು ಜಿಲ್ಲೆ ರಾಮನಗರದ ಮಾಗಡಿಯಲ್ಲಿ ಸರ್ಕಾರಿ ತಾಲ್ಲೂಕು ಕಚೇರಿ ಕಟ್ಟಡ ದುಸ್ಥಿಗೆ ತಲುಪಿದೆ. ಕಳೆದ 10 ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದು ಕಟ್ಟಡದ ಬಾಗಿಲು ಮುರಿದಿವೆ, ಕಿಟಕಿಗಳು ಗಾಜುಗಳು ಒಡೆದಿವೆ, ಮಳೆಗೆ ಮೇಲ್ಚಾವಣಿ ಸೋರುತ್ತಿದ್ದು ಕಚೇರಿ ಕಡತಗಳನ್ನು ರಕ್ಷಿಸಲು ಟಾರ್ಪಲ್ಗಳ ಮೊರೆಹೋಗಲಾಗಿದೆ.
ನಿತ್ಯ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುವ ಕಚೇರಿಯೂ ಶಿಥಿಲಗೊಂಡಿದೆ, ಇದರಿಂದ ಕಚೇರಿಗೆ ಅಲೆಯುವ ಸಾರ್ವಜನಿಕರು, ಇಲ್ಲಿನ ಸಿಬ್ಬಂದಿಗಳು ಜೀವ ಭಯದಿಂದ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಭೇಗ ಕಟ್ಟಡ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.