Saturday, December 21, 2024

ಎಟಿಎಂ ದರೋಡೆ ಮಾಡಿದ್ದ ಖತರ್ನಾಕ್​ ಕಳ್ಳರ ಬಂಧನ!

ಬೆಂಗಳೂರು: ಪರಪ್ಪನ ಅಗ್ರಹಾರದ ಬಳಿ ಎಟಿಎಂ ದರೋಡೆ ನಡೆಸಿದ್ದ ಖತರ್ನಾಕ್​ ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ರಾತ್ರೋ ರಾತ್ರಿ ಗೇಟ್​ ಹಾರುತ್ತಿರುವ ಹಾಸ್ಟೆಲ್​ ವಿದ್ಯಾರ್ಥಿನಿಯರು ! ಗೃಹಸಚಿವರ ಕ್ಷೇತ್ರದಲ್ಲಿ ಕರ್ಮಕಾಂಡ

ಮಹೇಶ್, ಅರುಳ್ ಕುಮಾರ್, ನದೀಂ, ಶ್ರೀರಾಮ್ ಬಂಧಿತ ಆರೋಪಿಗಳು, ಎಟಿಎಂಗೆ ಹಣ ತುಂಬಿದ ಸದಸ್ಯರಲ್ಲಿ ಒಬ್ಬರಾದ ಅರುಳ್ ಕುಮಾರ್ ಮತ್ತೋರ್ವ ಸಿಬ್ಬಂದಿಯಿಂದ ದರೋಡೆ ನಡೆದಿದೆ ಎನ್ನಲಾಗಿದೆ.

ಜುಲೈ 5 ರಂದು ಪರಪ್ಪನ ಅಗ್ರಹಾರದ ಬಳಿ ಇರುವ ಎಟಿಎಂ ಗೆ ಹಣ ತುಂಬಲು ಬಂದಿದ್ದ ತಂಡದಲ್ಲಿ ಅರುಳ್​ ಕುಮಾರ್​ ಕೂಡ ಇದ್ದ, ಯಂತ್ರಕ್ಕೆ ಹಣ ತುಂಬಿದ ಬಳಿಕ ಎಟಿಎಂ ಸೆಕ್ಯೂರಿಟಿ ಸೇಫ್ಟಿ ಡೋರ್​ ಸರಿಯಾಗಿ ಮುಚ್ಚದೇ ಹಾಗೆ ಬಿಟ್ಟು ಕಳ್ಳರ ಗುಂಪಿಗೆ ಮಾಹಿತಿ ನೀಡಿದ್ದಾನೆ.

ಎಟಿಎಂ ಯಂತ್ರಕ್ಕೆ ಹಣ ತುಂಬಿದ ಕೆಲವೇ ನಿಮಿಷಗಳಲ್ಲಿ ಹೆಲ್ಮೆಟ್​ ಧರಿಸಿ ಬಂದ ಕಳ್ಳರು ಸೇಫ್ಟಿ ಡೋರ್​ ತೆಗೆದು ಕರೆನ್ಸಿ ಬಾಕ್ಸ್​  ಸಮೇತ 24 ಲಕ್ಷ ದೋಚಿ ಪರಾರಿಯಾಗಿದ್ದರು. ಹಣ ದೋಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

RELATED ARTICLES

Related Articles

TRENDING ARTICLES