Monday, December 23, 2024

ಹಂಪಿಯಲ್ಲಿ ನಡೆದ ಜಿ-20 ಸಭೆ ಯಶಸ್ವಿ : ಅಮಿತಾಬ್ ಕಾಂತ್

ವಿಜಯನಗರ : ಹಂಪಿಯಲ್ಲಿ ನಡೆದ ಜಿ-20 ಶೆರ್ಪಾ ಸಭೆ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ಶೆರ್ಪಾಗಳಿಗೆ ಅಭೂತಪೂರ್ವ ಅನುಭವವಾಗಿದೆ ಎಂದು ಭಾರತದ ಶೆರ್ಪಾ ಅಮಿತಾಬ್ ಕಾಂತ್ ತಿಳಿಸಿದ್ದಾರೆ.

ಹಂಪಿ ಎವಾಲ್ವ್ ಬ್ಯಾಕ್ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಹಂಪಿಯನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡಿದ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಅಭಿನಂದನಾರ್ಹರು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಮಕ್ಕಳ ಪ್ರದರ್ಶನ ಚೆನ್ನಾಗಿತ್ತು. ಹಂಪಿ ಬೈ ನೈಟ್ ಬಹಳ ಒಳ್ಳೆಯ ಅನುಭವ ನೀಡಿದೆ. ಹಂಪಿ ಭಿನ್ನವಾಗಿ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂರನೇ ಜಿ-20 ಶೃಂಗಸಭೆಗೆ ಹಂಪಿ ಸಾಕ್ಷಿಯಾಗಿದೆ. ಈ ಸಭೆಯಲ್ಲಿ ಯಾವುದಕ್ಕೆ ಭಾರತದ ಪ್ರಾಮುಖ್ಯತೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಸಭೆಯಲ್ಲಿ ಜಿ-20 ರಾಷ್ಟ್ರಗಳು ಯಶಸ್ವಿಯಾಗಿ ಭಾಗವಹಿಸಿವೆ. ಅಲ್ಲದೇ ಪ್ರಾಪಂಚಿಕ ಅಭಿವೃದ್ಧಿಪರ ವಿಚಾರಗಳು ಚರ್ಚೆಯಾಗಿದೆ ಎಂದರು.

RELATED ARTICLES

Related Articles

TRENDING ARTICLES