Monday, December 23, 2024

ಜು.16ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವಧಿ ಮುಕ್ತಾಯ!

ಬೆಂಗಳೂರು : ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್  ರ ನಿರ್ದೇಶಕ ಸ್ಥಾನದ ಅವಧಿ ಜುಲೈ 16 ರಂದು ಮುಕ್ತಾಯವಾಗಲಿರುವ ಹಿನ್ನೆಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ನ್ಯಾಯಾಧೀಶರ ಕಾರು ಮತ್ತು ಬಸ್ ನಡುವೆ ಅಪಘಾತ!

ಡಾ.ಸಿಎನ್ ಮಂಜುನಾಥ್ ಅವರು 2007 ರಿಂದಲೂ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು ಸತತ 16 ವರ್ಷಗಳಿಂದಲೂ  ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2022 ರ ಜುಲೈ ತಿಂಗಳಿನಲ್ಲೇ ಇವರ ನಿರ್ದೇಶಕ ಸ್ಥಾನದ ಅವಧಿ ಮುಕ್ತಾಯವಾಗಿತ್ತು,

ರೋಗಿಗಳು, ಜನರ ಒತ್ತಾಯದ ಮೇರೆಗೆ ಕಳೆದ ಬಾರಿಯ ಸರ್ಕಾರ ಒಂದು ವರ್ಷಗಳ ಸೇವಾವಧಿಯನ್ನು ಮುಂದುವರೆಸುವಂತೆ ಸೂಚನೆ ನೀಡಿತ್ತು, ಅದರಂತೆ ಒಂದು ವರ್ಷಗಳ ಅವಧಿ ನಿರ್ದೇಶಕರಾಗಿದ್ದರು. ಸದ್ಯ ಜು.16ಕ್ಕೆ ಇವರ ನಿರ್ದೇಶಕ ಸ್ಥಾನದ ಅವಧಿ ಮುಕ್ತಾಯವಾಗಲಿದೆ.

ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆ ಇಂದು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದು ಮುಂದಿನ ನಿರ್ಧಾರ ಇನ್ನಷ್ಟೆ ತಿಳಿಯಬೇಕಿದೆ.

RELATED ARTICLES

Related Articles

TRENDING ARTICLES