ಮಂಡ್ಯ : ನಾನು ಲೋಕಸಭಾ ಚುನಾವಣೆಯ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚೆಗಳು, ಊಹಾಪೋಹಗಳು, ಅಂತೆ-ಕಂತೆಗಳಿಗೆ ನಾನು ಉತ್ತರ ಕೊಡಲ್ಲ. ಅಂತಹ ಸಂದರ್ಭಗಳು ಬಂದಾಗ ನಾನು ಮಾತಾಡುತ್ತೇನೆ ಎಂದರು.
ತಮಿಳುನಾಡು ಕಾವೇರಿ ನೀರು ಕೇಳಿರುವ ವಿಚಾರ ಕುರಿತು ಮಾತನಾಡಿ, ಟ್ರಿಬ್ಯೂನಲ್ ಪ್ರಕಾರ ನೀರಿನ ಹಂಚಿಕೆ ವಿಚಾರದಲ್ಲಿ ನಿಯಮಗಳು ಇವೆ. ಸದ್ಯ ಮಳೆ ತುಂಬಾ ಕಡಿಮೆ ಬೀಳ್ತಾ ಇದೆ. ಕೆಆರ್‌ಎಸ್ ನೀರಿನ ಮಟ್ಟ ಆತಂತಕರವಾಗಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಎರಡು ತಿಂಗಳು ಮಾತ್ರ ಕುಡಿಯುವ ನೀರು ಇರು ಇರೋದು ಎಂದರು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ನವರೇ ಇಷ್ಟು ಆತುರ ಏಕೆ? : ಹೆಚ್.ಡಿ ಕುಮಾರಸ್ವಾಮಿ
ಕೇಂದ್ರದ ಬಳಿ ಮಾತನಾಡುತ್ತೇವೆ
ಎರಡು ತಿಂಗಳು ಆದ ಮೇಲೆ ಆತಂಕದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಈ ಬಗ್ಗೆ ರಾಜ್ಯದ ಸಚಿವರ ತುರ್ತು ಸಭೆಯನ್ನು ಕರೆಯಬೇಕು. ರಾಜ್ಯದಲ್ಲಿ ಸಭೆ ನಡೆಸಿ, ಬಳಿಕ ಕೇಂದ್ರದ ಬಳಿ ಮಾತನಾಡುತ್ತೇವೆ ಎಂದು ಸುಮಲತಾ ತಿಳಿಸಿದರು.
ತಮಿಳುನಾಡಿಗೆ ನೀರು ಕೊಡೋದು ಕಷ್ಟ
ಸದ್ಯ ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಆದ್ರೆ, ನೀರಿನ ಸಮಸ್ಯೆ ಬಂದಾಗ ಕುಡಿಯುವ ನೀರಿಗೆ ಆದ್ಯತೆ ನೀಡುತ್ತಾರೆ. ಮುಂದೆ ಮಳೆ ಬೀಳದೆ ಇದ್ರೆ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತೆ. ರೈತರು ಇರುವ ಬೆಳೆಗಳನ್ನು ಉಳಿಸಿಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಕೊಡೋದು ಕಷ್ಟ ಇದೆ ಎಂದು ಮಾಹಿತಿ ನೀಡಿದರು.