ಬೆಂಗಳೂರು: ಲಂಚಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಕಾಲ್ಕಿತ್ತ ಭ್ರಷ್ಟ ಅಧಿಕಾರಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.
ಇದನ್ನೂ ಓದಿ: ಬೈಕ್ ನಿಯಂತ್ರಣ ತಪ್ಪಿ ಅಪ್ರಾಪ್ತ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ!
ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಕಚೇರಿಯಲ್ಲಿ ನಲ್ಲಿ ಫುಡ್ ಇನ್ಸ್ಪೆಕ್ಟರ್ ಆಗಿರುವ ಮಹಾಂತೇ ಗೌಡ ಬಂಧಿತ, ಟ್ರೇಡ್ ಲೈಸೆನ್ಸ್ ಗಾಗಿ ರಂಗದಾಮಯ್ಯ ಎಂಬುವವರ ಬಳಿ ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಇದರ ಮುಂಗಡವಾಗಿ 43 ಸಾವಿರ ಹಣ ಪಡೆಯುವಾಗ ಬಂಧನಕ್ಕೆ ಮುಂದಾದ ಲೋಕಾಯುಕ್ತ ಅಧಿಕಾರಿಗಳ ತಂಡವನ್ನು ಕಂಡು ಹಣ ಪಡೆದು ಸ್ಥಳದಿಂದ ಕಾರ್ ನಲ್ಲಿ ಪರಾರಿಯಾಗಲು ಯತ್ನಿಸಿದ.
ಮಹಂತೇಶ್ ಗೌಡನನ್ನು ಲೋಕಾಯುಕ್ತ ಅಧಿಕಾರಿಗಳು ಸುಮಾರು 15 ಕಿ.ಮೀ ದೂರ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ನೆಲಮಂಗಲದ ಸೊಂಡೇಕೊಪ್ಪ ಬಳಿ ವಶಕ್ಕೆ ಪಡೆದಿದ್ದಾರೆ.
ಸದ್ಯ ಲೋಕಾಯುಕ್ತ ಪೊಲೀಸರ ವಶದಲ್ಲಿರುವ ಫುಡ್ ಇನ್ಸ್ಪೆಕ್ಟರ್ ಮಹಂತೇಶ್ ಗೌಡನ ವಿಚಾರಣೆ ನಡೆಸುತ್ತಿದ್ದಾರೆ