Wednesday, January 22, 2025

ಬೈಕ್​ ನಿಯಂತ್ರಣ ತಪ್ಪಿ ಅಪ್ರಾಪ್ತ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ!

ಆನೇಕಲ್ : ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿದ ಪರಿಣಾಮ ಅಪ್ರಾಪ್ತ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ ಮುನಿಮಾರನದೊಡ್ಡಿಯಲ್ಲಿ ನಡೆದಿದೆ.

ಇದನ್ನೂ ಓದಿ : ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಗ್ರೀನ್​ ಸಿಗ್ನಲ್! ಹಾಲಿ,ಮಾಜಿ ಶಾಸಕರಿಂದ ಲಾಭಿ ಶುರು

​ರೋಷನ್ ಕುಮಾರ್ ಮೃತ ಬಾಲಕ, ಬಿಹಾರ ಮೂಲದ ದಿಲೀಪ್ ರಾಯ್ ಹಾಗು ಸಂಜು ದಂಪತಿಯ ಹಿರಿಯ ಮಗ, ಶುಕ್ರವಾರ ಸಂಜೆ ಮೃತ ರೋಷನ್​ ಮತ್ತು ತನ್ನಿಬ್ಬರು ಸಹೋದರಾದ ಆಕಾಶ್​ ಮತ್ತು ರಾಕೇಶ್​ ಜೊತೆ ಬೈಕ್ ನಲ್ಲಿ ಬನ್ನೇರುಘಟ್ಟದಿಂದ ಕಗ್ಗಲೀಪುರ ಮಾರ್ಗವಾಗಿ ಹೋಗುತ್ತಿದ್ದಾಗ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಮುನಿಮಾರನದೊಡ್ಡಿ ಸಮೀಪ ಘಟನೆ ನಡೆದಿದೆ.

ಅತೀ ವೇಗದಿಂದ ಬಂದು ಬೈಕ್ ಚಾಲಕನ ನಿಯಂತ್ರಣ ತಪ್ಪಿದ್ದು ಕೆಳಗೆ ಬಿದ್ದ ಪರಿಣಾಮ ರೋಷನ್​ ನ ತಲೆ ಒಡೆದು ಮೆದುಳು ಹೊರ ಬಂದು ಈ ದುರ್ಘಟನೆ ಸಂಭವಿಸಿದೆ, ಸದ್ಯ ಘಟನೆಯು ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ  ಘಟನೆಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES