ಬೆಂಗಳೂರು : ಜುಲೈ ತಿಂಗಳ ಕೊನೆಯಲ್ಲಿ ಬೆಂಗಳೂರಿಗೆ ಹೊಸ ರೂಪ ಬರ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಮುಖ ಕಂಪನಿಗಳು, ಶಾಸಕರು, ಸಂಸದರು ಜೊತೆ ಚರ್ಚೆ ಮಾಡಿದ್ದೆ. ವೆಬ್ಸೈಟ್ನಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಅಭಿಪ್ರಾಯ ತಿಳಿಸಿದ್ದಾರೆ ಎಂದರು.
ತೆರಿಗೆ ವಂಚಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಾನಸಿಕವಾಗಿ ಬೆಂಗಳೂರು ನಾಗರಿಕರು ತಯಾರಾಗಬೇಕು. ಕಂಪ್ಲೀಟ್ ಡಾಕ್ಯುಮೆಂಟ್ ಸ್ಕ್ಯಾನ್ ಮಾಡ್ತೀವಿ. ಎಷ್ಟೆಷ್ಟು ಕಟ್ಟಡಗಳು ಇವೆ, ತೆರಿಗೆ ಕಟ್ಟಿಲ್ಲ ಅನ್ನೋದು ಗೊತ್ತಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ : ಸಿದ್ದರಾಮಯ್ಯ-ಡಿಕೆಶಿ ವಿರುದ್ಧ ಶೋಭಾ ಕರಂದ್ಲಾಜೆ ರೆಬಲ್
ಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಸಂವಾದ ನಡೆಸಲಾಯಿತು. ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಬ್ರ್ಯಾಂಡ್ ಬೆಂಗಳೂರು… pic.twitter.com/hW6ryeN3Ma
— DK Shivakumar (@DKShivakumar) July 15, 2023
ಜಾಹೀರಾತು ನೀತಿಗೆ ಹೊಸ ಪಾಲಿಸಿ
ಜಾಹೀರಾತು ನೀತಿಗೆ ಹೊಸ ಪಾಲಿಸಿ ಜಾರಿ ಮಾಡ್ತೇವೆ. ಸಂಘಸಂಸ್ಥೆಗಳ ಜೊತೆಯೂ ಮಾತಾಡ್ತಿದ್ದೇನೆ. ಮ್ಯಾನೇಜ್ಮೆಂಟ್, ಟೆಕ್ನಿಕಲ್ ಸಂಸ್ಥೆಗಳ ಜೊತೆ ಚರ್ಚೆ ಮಾಡ್ತೇನೆ. ಕಸ, ಟ್ರಾಫಿಕ್, ಕೆರೆ, ಫೈಬರ್ ಅಳವಡಿಕೆ, ವಾರ್ಡ್ ವಿಚಾರಗಳ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ ಎಂದರು.
ಬೆಂಗಳೂರು ಕ್ಷೇಮಾಭಿವೃದ್ಧಿ ಸಂಘದವರು ಪಾಲ್ಗೊಂಡಿದ್ರು. ಗ್ರಾಮ ಸಭೆ ರೀತಿ ವಾರ್ಡ್ ಸಭೆ ನಡೆಸಲು ಕೇಳಿದ್ದಾರೆ. ಪಾರ್ಕಿಂಗ್, ಫುಟ್ಪಾತ್ ಅತಿಕ್ರಮಣ, ಸೇರಿ ಅನೇಕ ಸಲಹೆ ಕೊಟ್ಟಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದರು.